HEALTH TIPS

ವಂದೇಭಾರತದಲ್ಲಿ ರಾತ್ರಿ ತಿರೂರ್ ತಲುಪುವವರಿಗೆ ಕೆ.ಎಸ್.ಆರ್.ಟಿ.ಸಿ.ಯಿಂದ ಪ್ರಯಾಣದ ವ್ಯವಸ್ಥೆ

                   ಮಲಪ್ಪುರಂ: ಮಲಪ್ಪುರಂ ಕೆ.ಎಸ್.ಆರ್.ಟಿ.ಸಿ. ಡಿಪೆÇೀ ರಾತ್ರಿ ವೇಳೆ ವಂದೇಭಾರತ್ ಎಕ್ಸ್‍ಪ್ರೆಸ್‍ನಲ್ಲಿ ತಿರೂರ್‍ಗೆ ಆಗಮಿಸುವ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡಿದೆ.

                   ಈ ಸೇವೆಯು ತಿರೂರ್ ರೈಲು ನಿಲ್ದಾಣದಿಂದಲೇ ಕಾರ್ಯನಿರ್ವಹಿಸಲಿದೆ. ಅಕ್ಟೋಬರ್ 3ರಿಂದ ಬಸ್ ಸಂಚಾರ ಆರಂಭವಾಗಲಿದೆ.

                   ಸಂಜೆ 7 ಗಂಟೆಗೆ ಮಂಚೇರಿಯಿಂದ ತಿರೂರಿಗೆ ಬಸ್ ಹೊರಡಲಿದೆ. ವಂದೇಭಾರತ್ 8.52ಕ್ಕೆ ತಿರೂರ್ ತಲುಪಲಿದೆ. ನಂತರ ಬಸ್ ನಿಲ್ದಾಣದಿಂದ ರಾತ್ರಿ 9 ಗಂಟೆಗೆ ಸೇವೆ ಆರಂಭವಾಗಲಿದೆ. ರಾತ್ರಿ 10 ಗಂಟೆಗೆ ಬಸ್ ಮಲಪ್ಪುರಂ ಬಸ್ ನಿಲ್ದಾಣ ತಲುಪಲಿದೆ. ತಿರುವನಂತಪುರಂ ಸೇರಿದಂತೆ ದೂರದ ಊರುಗಳಿಂದ ಬರುವವರಿಗೆ ಬಸ್ ಸೇವೆ ಉಪಯುಕ್ತವಾಗಲಿದೆ. ವಂದೇಭಾರತದಲ್ಲಿ ರಾತ್ರಿ ತಿರೂರ್ ತಲುಪುವವರಿಗೆ ಕೆಎಸ್‍ಆರ್‍ಟಿಸಿ ಪ್ರಯಾಣದ ವ್ಯವಸ್ಥೆ ಮಾಡಿದೆ. 

           ಕಾಸರಗೋಡಲ್ಲೂ ಈ ರೀತಿಯಲ್ಲಿ ಲಿಂಕ್ ಸೇವೆ ಆರಂಭಿಸಲು ಒತ್ತಾಯ ಕೇಳಿಬಂದಿದೆ. ಜೊತೆಗೆ ಮಂಗಳೂರಿಗೆ ಸಂಪರ್ಕ ಸಾಧಿಸಲು ಕಾಸರಗೋಡು ರೈಲು ನಿಲ್ದಾಣದಿಂದ ಪ್ರತ್ಯೇಕ ರೈಲು ವ್ಯವಸ್ಥೆ ಮಾಡಬೇಕೆಂಬ ಬೇಡಿಕೆಯೂ ಇದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries