ತಿರುವನಂತಪುರ: ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕೇರಳದ ಕ್ರೀಡಾಪಟುಗಳು, ಪದಕ ವಿಜೇತರು ಹಾಗೂ ತರಬೇತುದಾರರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
10 ಪದಕ ವಿಜೇತರು ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸಿದ 33 ಕ್ರೀಡಾಪಟುಗಳು ಮತ್ತು ತರಬೇತುದಾರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕ್ರೀಡಾ ಸಚಿವ ವಿ. ಅಬ್ದುರ್ ರಹಿಮಾನ್ ಅಧ್ಯಕ್ಷತೆ ವಹಿಸಿದ್ದರು.
ಸಚಿವರಾದ ಕೆ.ಎನ್.ಬಾಲಗೋಪಾಲ್, ಜಿ.ಆರ್. ಅನಿಲ್, ಕೆ. ಕೃಷ್ಣನ್ ಕುಟ್ಟಿ, ಎ. ಕೆ ಶಶೀಂದ್ರನ್, ಪಿ. ರಾಜೀವ್, ಪಿ. ಎ. ಮುಹಮ್ಮದ್ ರಿಯಾಝ್, ವಿ. ಶಿವನ್ ಕುಟ್ಟಿ, ಪ್ರೊ. ಆರ್. ಬಿಂದು, ಆಂಟೋನಿ ರಾಜು, ಜೆ. ಚಿಂಚು ರಾಣಿ, ಮೇಯರ್ ಆರ್ಯ ರಾಜೇಂದ್ರನ್ ಮುಖ್ಯ ಅತಿಥಿಗಳಾಗಿದ್ದರು.