ಉಪ್ಪಳ: ಉಪ್ಪಳ ಕೈಕಂಬ ನಿವಾಸಿ, ಧಾರ್ಮಿಕ ಮುಂದಾಳು ಇಲ್ಲಿನ ಜೀವಾಮೃತ ವೈದ್ಯ ಶಾಲೆಯ ವೈದ್ಯ ಸದಾನಂದ ವೈದ್ಯರ್(83)ಶನಿವಾರ ಸ್ವಗೃಹದಲ್ಲಿ ನಿಧನರಾದರು. ಐವತ್ತು ವರ್ಷಕ್ಕೂ ಹೆಚ್ಚುಕಾಲ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಇವರು ಉಪ್ಪಳ ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ಲಯನ್ಸ್‍ಕ್ಲಬ್ ಉಪ್ಪಳ-ಮಂಜೇಶ್ವರದ ಸ್ಥಾಪಕ ಸದಸ್ಯರಾಗಿದ್ದರು. ಅವರು ಪುತ್ರಿ, ಮೂವರು ಪುತ್ರರನ್ನು ಅಗಲಿದ್ದಾರೆ.