ಕಾಸರಗೋಡು: ದಕ್ಷಿಣ ರೈಲ್ವೇಯ ಅಧೀನದಲ್ಲಿ ಪಾಲಕ್ಕಾಡ್ ಡಿವಿಷನ್ ಇಂಜಿನಿಯರಿಂಗ್ ಗೇಟ್‍ನಲ್ಲಿ ಗೇಟ್‍ಮ್ಯಾನ್ ಹುದ್ದೆಗೆ ಮಾಜಿ ಸೈನಿಕರಿಂದ ಅರ್ಜಿ ಆಹ್ವನಿಸಲಾಗಿದೆ. 2023 ಅಕ್ಟೋಬರ್ 20 ಕ್ಕೆ 50 ವರ್ಷ ವಯಸ್ಸು ಪೂರ್ಣಗೊಳಿಸದ ಹಾಗೂ ಎಸ್ಸೆಸೆಲ್ಸಿ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಮಾಜಿ ಸೈನಿಕರು ನಿಗದಿತ ಅರ್ಜಿ ನಮೂನೆಯನ್ನು ಕಚೇರಿಯಿಂದ ಪಡೆದು ಅಕ್ಟೋಬರ್ 13 ರೊಳಗೆ ಅರ್ಜಿಯನ್ನು ಮತ್ತು ಸಂಬಂಧಿಸಿದ ದಾಖಲೆಗಳನ್ನು ಕಛೇರಿಗೆ ನೀಡಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ 04994 256860 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.