ಮಂಜೇಶ್ವರ: ಮಂಜೇಶ್ವರ ಉಪ ಜಿಲ್ಲಾ ಮಟ್ಟದ ವಿಜ್ಞಾನೋತ್ಸವದ ಭಾಗವಾಗಿ ವಾರ್ತಾ ವಾಚನ ಸ್ಪರ್ಧೆ ಮಂಜೇಶ್ವರ ಸಮಾಜ ವಿಜ್ಞಾನ ಅಸೋಶಿಯೇಶನ್ ನ ನೇತೃತ್ವದಲ್ಲಿ ಸರ್ಕಾರಿ ಪ್ರೌಢ ಶಾಲೆ ಕಂಡಂಬಾರಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸುನಿತ ಕೆ.ಬಿ. ವಹಿಸಿದ್ದರು. ಹಿರಿಯ ಪತ್ರಕರ್ತ ಮಲಾರ್ ಜಯರಾಂ ರೈ ಉದ್ಘಾಟಿಸಿದರು. ಮಂಜೇಶ್ವರ ಉಪ ಜಿಲ್ಲಾ ಪ್ರಭಾರ ವಿದ್ಯಾಧಿಕಾರಿ ಜೀತೇಂದ್ರ, ಕಡಂಬಾರ್ ಶಾಲಾ ಅಭಿವೃದ್ದಿ ಸಮಿತಿ ಸಂಚಾಲಕಿ ಮಮತ ಟೀ ಚರ್, ಪ್ರತಿಭ, ರುಕ್ಮಿಣಿ, ಪಾರ್ವತಿ ಟೀಚರ್, ಬೇಕೂರು ಶಾಲಾ ಶಿಕ್ಷಕ ಹರೀಶ್ ಮಾಸ್ತರ್ ಶುಭ ಹಾರೈಸಿದರು.
ರಾಘವ ಮಾಸ್ತರ್, ಪತ್ರಕರ್ತ ರವಿ ನಾಯ್ಕಾಪು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಮಂಜೇಶ್ವರ ಉಪ ಜಿಲ್ಲಾ ಸಮಾಜ ವಿಜ್ಞಾನ ಅಸೋಸಿಯೇಶನ್ ಅಧ್ಯಕ್ಷ ರಾಜೇಶ್ ಕೊಡ್ಲಮೊಗರು ಸ್ವಾಗತಿಸಿ, ವಂದಿಸಿದರು. ವಿಜೇತ ಟೀಚರ್ ಕಾರ್ಯಕ್ರಮ ನಿರೂಪಿಸಿದರು.
ಹೈಸ್ಕೂಲ್ ಕನ್ನಡ ವಿಭಾಗದಲ್ಲಿ ಶ್ರೇಯಾ ಕೆ.ಭಟ್ ಪ್ರಥಮ, ಕೆ.ಪಿ.ಪೂಜಾ ಲಕ್ಷ್ಮಿ ದ್ವಿತೀಯ, ಶುಭಧ ತೃತೀಯ ಸ್ಥಾನ ಪಡೆದರು. ಹೈಯರಿ ಸೆಕೆಂಡರಿ ಕನ್ನಡ ವಿಭಾಗದಲ್ಲಿ ಧನ್ಯಶ್ರೀ ಪ್ರಥಮ, ಮರಿಯಮ್ಮ ಐಫ ದ್ವಿತೀಯ ಸ್ಥಾನ ಪಡೆದರು. ಹೈಸ್ಕೂಲ್ ಮಲಯಾಳಂ ವಿಭಾಗದಲ್ಲಿ ಅನುಶ್ರೀ ಪ್ರಥಮ, ಕ ದೀಜತ್ ಅನೀಶ ದ್ವಿತೀಯ ಸ್ಥಾನ ಹಾಗೂ ಶ್ರೀಲಕ್ಷಿ ತೃತೀಯ ಸ್ಥಾನ ಪಡೆದರು. ಹೈಯರಿ ಸೆಕೆಂಡರಿ ಮಲಯಾಳಂ ವಿಭಾಗದಲ್ಲಿ ಅತೀಫ ಪ್ರಥಮ, ಆಯಿಶತ್ ಉಮೈರಾ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಆಯಿಶತ್ ಹಸ್ಬೀನ ಪಡೆದುಕೊಂಡರು.