HEALTH TIPS

ಭವಿಷ್ಯದ ಯುದ್ಧಗಳಿಗೆ ಸನ್ನದ್ಧವಾಗಲು ಪ್ರಾಚೀನ ಗ್ರಂಥಗಳ ನೆರವು!; ಭಾರತೀಯ ಭೂಸೇನೆ ಯೋಜನೆ 'ಉದ್ಭವ'

                ವದೆಹಲಿ: ಭವಿಷ್ಯದ ಯುದ್ಧಗಳ ಸಿದ್ಧತೆಗೆ ಪ್ರಾಚೀನ ಭಾರತೀಯ ಗ್ರಂಥಗಳಿಂದ ಪಾಠ ಕಲಿಯಲು ಜಗತ್ತಿನ ಎರಡನೇ ಅತಿ ದೊಡ್ಡದಾದ ಭಾರತೀಯ ಭೂಸೇನೆ ಯೋಜನೆಯೊಂದನ್ನು ರೂಪಿಸಿದೆ. ಕೌಟಿಲ್ಯನ ಅರ್ಥಶಾಸ್ತ್ರ, ಕಾಮಂದಕನ ನೀತಿಸಾರ ಮತ್ತು ತಮಿಳು ಸಂತ-ಕವಿ ತಿರುವಳ್ಳುವರ್​ನ ಕುರಳ್ ಎಂದೇ ಖ್ಯಾತವಾದ ತಿರುಕ್ಕುರಳ್ ಮೊದಲಾದ ಗ್ರಂಥಗಳಿಂದ ಯುದ್ಧ ಕಾರ್ಯತಂತ್ರ, ರಾಜತಾಂತ್ರಿಕತೆಗಳ ಪ್ರಾಚೀನ ಭಾರತೀಯ ತತ್ವಶಾಸ್ತ್ರವನ್ನು ಮರುಶೋಧಿಸಿ 21ನೇ ಶತಮಾನದಲ್ಲಿ ಅವುಗಳ ಪ್ರಸ್ತುತತೆಯನ್ನು ಸಂಸ್ಥಾಪಿಸುವುದು ಇದರ ಉದ್ದೇಶವಾಗಿದೆ ಎಂದು ವಿಷಯದ ಕುರಿತು ಬಲ್ಲ ಅಧಿಕಾರಿಗಳು ತಿಳಿಸಿದ್ದಾರೆ.

              ಕಾಲಗರ್ಭದಲ್ಲಿ ಅಡಗಿರುವ ಅಮೂಲ್ಯ ವಿವೇಕವನ್ನು ಬಳಸಿಕೊಳ್ಳುವುದು 'ಉದ್ಭವ' ಎಂಬ ಹೆಸರಿನ ಭೂಸೇನೆಯ ಯೋಜನೆಯ ಭಾಗವಾಗಿದೆ. ರಕ್ಷಣೆ, ಶಿಕ್ಷಣ, ಆರೋಗ್ಯ ಮತ್ತು ವಿಜ್ಞಾನ ಸಹಿತ ಪ್ರಮುಖ ವಲಯಗಳನ್ನು ಭಾರತೀಕರಣಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳ ಹಿನ್ನೆಲೆಯಲ್ಲಿ ಈ ಯೋಜನೆ ರೂಪುಗೊಂಡಿದೆ. ಸರ್ಕಾರದ ಕೆಲವು ಪ್ರಯತ್ನಗಳು ವಿವಾದಾತ್ಮಕವಾಗಿಯೂ ಇವೆ.

ಅಧಿಕ ಗಮನ: ದೇಶದ ಶ್ರೀಮಂತ ಹಾಗೂ ಹೆಚ್ಚು ಅಧ್ಯಯನ ಮಾಡದ ವ್ಯೂಹಾತ್ಮಕ ಮತ್ತು ಮಿಲಿಟರಿ ಪರಂಪರೆ ಮೇಲೆ ಚರ್ಚೆ ಅಧಿಕ ಗಮನವನ್ನು ಕೇಂದ್ರೀಕರಿಸಿತ್ತು. ಈ ಶಾಸ್ತ್ರೀಯ ಬೋಧನೆಗಳನ್ನು ಸಮಕಾಲೀನ ಮಿಲಿಟರಿ ಮತ್ತು ರಣತಂತ್ರದ ವಲಯಗಳಿಗೆ ಮರುಪರಿಚಯಿಸುವ ಮೂಲಕ ಪ್ರಾಚೀನ ವಿವೇಕವನ್ನು ಆಧುನಿಕ ಸನ್ನಿವೇಶದಲ್ಲಿ ಅನ್ವಯಿಸುವುದು ಭಾರತೀಯ ಸೇನೆಯ ಉದ್ದೇಶವಾಗಿದೆ. 'ಭಾರತದ ಸಮೃದ್ಧ ಶಾಸ್ತ್ರೀಯ ಪರಂಪರೆಯಿಂದ ಜ್ಞಾನ ಸೃಷ್ಟಿಯನ್ನು' ಪುನಶ್ಚೇತನಗೊಳಿಸುವತ್ತ ಈ ಗೋಷ್ಠಿ ಒಂದು ಮಹತ್ವಾಕಾಂಕ್ಷೆಯ ಹೆಜ್ಜೆಯಾಗಿದೆ ಎಂದು ಸೇನೆ ವರ್ಣಿಸಿದೆ. ಕ್ರಿಸ್ತಪೂರ್ವ 4ನೇ ಶತಮಾನದಿಂದ ಕ್ರಿಸ್ತಶಕ 8ನೇ ಶತಮಾನದವರೆಗಿನ ಪ್ರಾಚೀನ ಗ್ರಂಥಗಳ ಅಧ್ಯಯನ ಚರ್ಚೆಯ ವ್ಯಾಪ್ತಿಯಲ್ಲಿದ್ದು ಕೌಟಿಲ್ಯ, ಕಾಮಂದಕ ಮತ್ತು ಕುರಲ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುತ್ತದೆ.

                    ಪಂಚ ಪ್ರಾಣ ಮಂತ್ರ: 2022ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ 'ಪಂಚ ಪ್ರಾಣ'ದ ನಿರ್ಧಾರವನ್ನು ಪ್ರಕಟಿಸಿದ್ದರು. ಸ್ವಾತಂತ್ರ್ಯದ ಶತಮಾನೋತ್ಸವ ವರ್ಷದೊಳಗೆ ಭಾರತವನ್ನು ಅಭಿವೃದ್ಧಿಹೊಂದಿದ ದೇಶವನ್ನಾಗಿ ಮಾಡುವ ಐದು ಸಂಕಲ್ಪಗಳೇ ಪಂಚ ಪ್ರಾಣವಾಗಿದೆ. ವಸಾಹತುಶಾಹಿ ಗುಲಾಮಿ ಮನೋಭಾವ ಮತ್ತು ಅಭ್ಯಾಸಗಳನ್ನು ಸಂಪೂರ್ಣವಾಗಿ ತೊಡೆದು ಹಾಕುವುದು ಆ ಸಂಕಲ್ಪಗಳಲ್ಲಿ ಒಂದಾಗಿದೆ.

              ಉದ್ಭವದ ಗುರಿ ಏನು?: ಐತಿಹಾಸಿಕ ಮತ್ತು ಸಮಕಾಲೀನತೆ ನಡುವೆ ಸೇತುವೆ ನಿರ್ವಿುಸುವುದು ಉದ್ಭವದ ಪ್ರಮುಖ ಗುರಿಯಾಗಿದೆ ಎಂದು ಭೂಸೇನೆ ವಕ್ತಾರ ಕರ್ನಲ್ ಸುಧೀರ್ ಚಮೋಲಿ ಶುಕ್ರವಾರ ಯೋಜನೆ ಕುರಿತು ನಡೆದ ಉದ್ಘಾಟನಾ ಚರ್ಚಾಗೋಷ್ಠಿಯಲ್ಲಿ ಹೇಳಿದರು. ದೇಶೀಯ ಮಿಲಿಟರಿ ವ್ಯವಸ್ಥೆಗಳ ಆಳ, ಅವುಗಳ ವಿಕಾಸ, ಮತ್ತು ಕಾಲಾಂತರದಲ್ಲಿ ಅವುಗಳ ಬಳಕೆಯಾಗಿದ್ದು ಮೊದಲಾದವನ್ನು ಅರ್ಥಮಾಡಿಕೊಳ್ಳುವುದು ಉದ್ದೇಶವಾಗಿದೆ ಎಂದು ಚಮೋಲಿ ಹೇಳಿದರು.                ಸಹಸ್ರಮಾನದಲ್ಲಿ ದೇಶವನ್ನು ಆಳಿದ ವ್ಯೂಹಾತ್ಮಕ ಚಿಂತನಾ ಪ್ರಕ್ರಿಯೆಗಳನ್ನು ಅರ್ಥೈಸುವುದು ಕೂಡ ನಮ್ಮ ಉದ್ದೇಶವಾಗಿದೆ ಎಂದರು. ಭೂಸೇನೆ ಮತ್ತು 1870ರಲ್ಲಿ ಸ್ಥಾಪಿಸಲಾದ ದೇಶದ ಅತ್ಯಂತ ಹಳೆಯ ಚಿಂತನ ಚಿಲುಮೆ ಭಾರತೀಯ ಸಂಯುಕ್ತ ಸೇವಾ ಸಂಸ್ಥೆ (ಯುಎಸ್​ಐ) ಜಂಟಿಯಾಗಿ ಗೋಷ್ಠಿಯನ್ನು ಏರ್ಪಡಿಸಿದ್ದವು. ವ್ಯೂಹಾತ್ಮಕ ಯೋಜನೆಯ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜು ಬೈಜಲ್ ಯೋಜನೆ ಬಗ್ಗೆ ಮಾಹಿತಿ ನೀಡಿದರು. ರಕ್ಷಣಾ ಸಚಿವಾಲಯದ ಪ್ರಧಾನ ಸಲಹೆಗಾರ ವಿನೋದ್ ಜಿ ಖಂಡಾರೆ ಅಧ್ಯಕ್ಷತೆ ವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries