ಕಾಸರಗೋಡು : ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಡಾ. ಲತಿಕಾ ಪಲ್ಲಿಯೋಟ್ ಅವರು ಆಸ್ಟ್ರೇಲಿಯಾದ ಕ್ವೀನ್ಸ್‍ಲ್ಯಾಂಡ್ ವಿಶ್ವವಿದ್ಯಾಲಯದ ಅಧೀನದಲ್ಲಿ ಇನ್‍ಸ್ಟಿಟ್ಯೂಟ್ ಆಫ್ ಮೊಲಿಕ್ಯುಲರ್ ಬಯೋಸೈನ್ಸ್‍ನಲ್ಲಿ ಪೋಸ್ಟ್-ಡಾಕ್ಟರೇಟ್ ಸಂಶೋಧನಾ ಅವಕಾಶ ಪಡೆದುಕೊಂಡಿದ್ದಾರೆ. ಅಮೆರಿಕಾದ ಹಾರ್ವರ್ಡ್ ವೈದ್ಯಕೀಯ ಶಾಲೆ, ಜರ್ಮನಿಯ ಹ್ಯಾನೋವರ್ ಯೂನಿವಸಿಟಿ ಆಫ್ ವೆಟರಿನರಿ ನೆಡಿಕಲ್ ಸಹಯೋಗದಲ್ಲಿ ವೈರಸ್ ಇನ್‍ಫೆಕ್ಷನ್ ವಲಯಕ್ಕೆ ಸಂಬಂಧಿಸಿ ಡಾ. ಲತಿಕಾ ಸಮಗ್ರ ಸಂಶೋಧನೆ ನಡೆಸಲಿದ್ದಾರೆ. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಬಯೋಕೆಮಿಸ್ಟ್ರಿ ಮತ್ತು ಆನ್ವಿಕ ಜೀವಶಾಸ್ತ್ರ ವಿಭಾಗದಲ್ಲಿ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ ಅವರ ನೇತೃತ್ವದಲ್ಲಿ ಲತಿಕಾ ಈ ವರ್ಷ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ. ಇವರು ಕಾಸರಗೋಡು ಜಿಲ್ಲೆಯ ಚೆರುವತ್ತೂರು ನಿವಾಸಿಯಾಗಿದ್ದಾರೆ.