ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ವಯೋಜನರ ಹಗಲು ಮನೆಯಲ್ಲಿ ಹಿರಿಯ ನಾಗರಿಕರ ವೇದಿಕೆಯ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ನಾಡಿನ ಹಿರಿಯ ಸಾಹಿತಿ, ಕವಿ, ನಿವೃತ್ತ ಅಧ್ಯಾಪಕ ವಿ.ಬಿ.ಕುಳಮರ್ವ ಇವರನ್ನು ಸನ್ಮಾನಿಸಲಾಯಿತು. ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಉಪಾಧ್ಯಕ್ಷೆ ಪ್ರಭಾವತಿ ಕೆದಿಲಾಯ ಇವರ ನೇತೃತ್ವದಲ್ಲಿ ಜರಗಿದ ಕವಿಗೋಷ್ಠಿಯಲ್ಲಿ ಜ್ಯೋತ್ಸ್ನಾ ಕಡಂದೇಲು, ಸುಶೀಲಾ ಪದ್ಯಾಣ ಸ್ವರಚಿತ ಕವನ ವಾಚಿಸಿದರು. ಬಳಿಕ ಭಜನೆ ಮತ್ತು ಪರಿಸರ ಶುಚೀಕರಣ ಕಾರ್ಯಕ್ರಮ ನಡೆಯಿತು. ಕೋಶಾಧಿಕಾರಿ ವಳಕ್ಕುಂಜ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಸಂಪತ್ತಿಲ ಶಂಕರನಾರಾಯಣ ಭಟ್ ವಂದಿಸಿದರು.