HEALTH TIPS

ಮಕ್ಕಳಿಗೆ ಸನಾತನ ಸಂಸ್ಕøತಿ ಅರಿವು ಮೂಡಿಸಬೇಕು : ಡಾ.ಸುಮತಿ ನಾಯಕ್

 

        

                        ಕಾಸರಗೋಡು: ಹಬ್ಬಗಳ ಆಚರಣೆ ಮೂಲಕ ಸನಾತನ ಸಂಸ್ಕøತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಪ್ರಯುಕ್ತ ನಡೆಯುವ ಸಾಂಸ್ಕøತಿಕ ಉತ್ಸವಗಳಲ್ಲಿ ಭಾಗವಹಿಸುವುದು ಹಿಂದೆಂದಿಗಿಂತ ಇಂದು ಹೆಚ್ಚು ಅಗತ್ಯವಾಗಿದೆ. ಒಗ್ಗೂಡಿ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಬಲಿಷ್ಠವಾದ ಭಾರತ ನಿರ್ಮಾಣ ಸಾಧ್ಯ. ಹಿಂದೂ ಸಂಸ್ಕøತಿಯ ಬಗೆಗಿನ ಮೌಲ್ಯಗಳನ್ನು, ಅದರ ವಿಶೇಷತೆಗಳನ್ನು ಮಕ್ಕಳಿಗೆ ಹಸ್ತಾಂತರಿಸುವುದರ ಮೂಲಕ ಸನಾತನ ಸಂಸ್ಕøತಿಯನ್ನು ಮತ್ತು ಪರಂಪರೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಖ್ಯಾತ ನೇತ್ರ ತಜ್ಞೆ ಡಾ.ಸುಮತಿ ನಾಯಕ್ ಹೇಳಿದರು. 

                   ಅವರು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ನೇತೃತ್ವದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ಆಯೋಜಿಸಿದ ಕಾಸರಗೋಡು ದಸರಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. 

                      ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ದಸರಾ ಮಹತ್ವದ ಬಗ್ಗೆ ಸಂಘಟಕ ಜಗದೀಶ್ ಕೂಡ್ಲು ಉಪನ್ಯಾಸ ನೀಡಿದರು. ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾಸರಗೋಡು ನಗರಸಭಾ ಸದಸ್ಯೆ ಶಾರದಾ ಅಭ್ಯಾಗತರಾಗಿ ಭಾಗವಹಿಸಿದರು. ಈ ಸಂದಭರ್Àದಲ್ಲಿ ಸಮಾಜ ಸೇವಕ ಎಸ್.ಕುಮಾರ್ ಅವರಿಗೆ ದಸರಾ ಗೌರವ ನೀಡಲಾಯಿತು.  

                   ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಕರ್ನಾಟಕ ಸ್ವರ ಕಂಠೀರವ ಮತ್ತು ಸ್ವರ ತಪಸ್ವಿ ಪುರಸ್ಕøತ ಜೂ.ರಾಜ್ ಖ್ಯಾತಿಯ ಜಗದೀಶ್ ಶಿವಪುರ ಅವರಿಂದ ಭಾವಗಾನ ವೈಭವ ಹಾಗು ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಸರಗೋಡು ನಗರಸಣಾ ಮಾಜಿ ಸದಸ್ಯ ಶಂಕರ ಕೆ. ಸ್ವಾಗತಿಸಿದರು. ನಿಶ್ಮಿತಾ ಮಿಥುನ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಜ್ಞಾ ರಂಜಿತ್ ಪ್ರಾರ್ಥನೆ ಹಾಡಿದರು. ಗ್ರೀಷ್ಮಾ ವಂದಿಸಿದರು.  





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries