ತಿರುವನಂತಪುರಂ: ಮುಂಬರುವ ಲೋಕಸಭೆ ಚುನಾವಣೆ ತಯಾರಿಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇರಳಕ್ಕೆ ಭೇಟಿ ನೀಡಲಿದ್ದಾರೆ.
ನಡ್ಡಾ ಅವರು ಎನ್ ಡಿ ಎಯ ಸೆಕ್ರೆಟರಿಯೇಟ್ ಮೆರವಣಿಗೆಯನ್ನು ಉದ್ಘಾಟಿಸಲು ಇದೇ ತಿಂಗಳ 30 ರಂದು ಕೇರಳಕ್ಕೆ ಆಗಮಿಸಲಿದ್ದಾರೆ. ನಂತರ ಡಿಸೆಂಬರ್ ಎರಡನೇ ವಾರದಲ್ಲಿ ಅಮಿತ್ ಶಾ ಆಗಮಿಸಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ರಾಜ್ಯಮಟ್ಟದ ಜನಜಾಗರಣ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಶಾ ತಿರುವನಂತಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ತಿರುವನಂತಪುರದಿಂದ ಕಾಸರಗೋಡಿಗೆ ಜನಜಾಗರಣ ಯಾತ್ರೆ ನಡೆಯಲಿದೆ. ರಾಜ್ಯದ ಎಲ್ಲಾ 20 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿರುವ ಯಾತ್ರೆಯಲ್ಲಿ ಸುಮಾರು 25 ಸಾವಿರ ಕಾರ್ಯಕರ್ತರು ಜೊತೆಯಾಗಲಿದ್ದು, ಪ್ರಮುಖ ಕೇಂದ್ರಗಳಲ್ಲಿ ನಡೆಯುವ ಸ್ವಾಗತ ಸಭೆಯಲ್ಲಿ ಕೇಂದ್ರ ನಾಯಕರು ಪಾಲ್ಗೊಳ್ಳಲಿದ್ದಾರೆ. ಎಡರಂಗ ಸರ್ಕಾರದ ಭ್ರಷ್ಟ ಆಡಳಿತದ ವಿರುದ್ಧ ಮತ್ತು ಕರುವನ್ನೂರು ಬ್ಯಾಂಕ್ ವಂಚನೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಎನ್‍ಡಿಎ ರ್ಯಾಲಿ ನಡೆಸಲಿದೆ. ‘ಎಡ ಸರ್ಕಾರದ ಭ್ರμÁ್ಟಚಾರದ ವಿರುದ್ಧ ಬಿಜೆಪಿ ಹೋರಾಟ’ ಎಂಬ ಅಭಿಯಾನವನ್ನು ಬಿಜೆಪಿ ಆಯೋಜಿಸಿದೆ.
ನ..1ರಿಂದ 20ರವರೆಗೆ ಕರುವನ್ನೂರು ಸೇರಿದಂತೆ ನಾನಾ ಸಮಸ್ಯೆಗಳ ಕುರಿತು ರಾಜ್ಯಾದ್ಯಂತ ಸುಮಾರು 2 ಸಾವಿರ ಕೇಂದ್ರಗಳಲ್ಲಿ ಸಂಜೆ ಸಭೆ ನಡೆಯಲಿದೆ. ಸೆಕ್ರೆಟರಿಯೇಟ್ ಮಾರ್ಚ್ ಮುಕ್ತಾಯಗೊಳ್ಳಲಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟನಾತ್ಮಕವಾಗಿ ತೀವ್ರವಾಗಿ ಬದಲಾಯಿಸಲು, ಅದರ ವರ್ಚಸ್ಸು ಸುಧಾರಿಸಲು ಮತ್ತು ರಾಜಕೀಯವನ್ನು ಗಂಭೀರವಾಗಿ ಸಮೀಪಿಸಲು ಕೇಂದ್ರ ನಾಯಕತ್ವವು ಮುಂದಾಗಿದೆ.
ಇದರ ಬೆನ್ನಲ್ಲೇ ರಾಜ್ಯ ನಾಯಕತ್ವವೂ ಅನಗತ್ಯ ಹೇಳಿಕೆ ನೀಡುವುದನ್ನು ನಿರ್ಬಂಧಿಸಲಾಗಿದೆ. ರಾಜ್ಯಾಧ್ಯಕ್ಷರು ನೇಮಿಸಿದ ನಾಯಕನಿಗೆ ಮಾತ್ರ ಮಾಧ್ಯಮಗಳೊಂದಿಗೆ ಸಂವಹನ ನಡೆಸಲು ಅಧಿಕಾರವಿದೆ. ನವೆಂಬರ್ ಮೂರನೇ ವಾರದಲ್ಲಿ ಸುಮಾರು 2900 ಪಕ್ಷದ ಪ್ರತಿನಿಧಿಗಳಿಗೆ ತರಬೇತಿ ಶಿಬಿರ ನಡೆಯಲಿದೆ.