ನವದೆಹಲಿ: ಗಾಜಾದಲ್ಲಿ ಇಸ್ರೇಲ್-ಹಮಾಸ್ ಬಂಡುಕೋರರ ನಡುವಿನ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ನಿರ್ಣಯದ ಮೇಲಿನ ಮತದಾನದಿಂದ ಹೊರಗುಳಿದ ಭಾರತದ ಕ್ರಮವನ್ನು ಖಂಡಿಸಿರುವ ಸಿಪಿಎಂ ನ ಹಿರಿಯ ಮುಖಂಡರು, ಪ್ಯಾಲೆಸ್ಟೀನ್ ಜನರಿಗೆ ಬೆಂಬಲ ವ್ಯಕ್ತಪಡಿಸಿ ಭಾನುವಾರ ಸಾಂಕೇತಿಕ ಧರಣಿ ನಡೆಸಿದರು.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ತ್ರಿಪುರ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ಎಂ.ಡಿ. ಸಲೀಂ, ಬೃಂದಾ ಕಾರಟ್, ಪ್ರಕಾಶ್ ಕಾರಟ್ ಸೇರಿದಂತೆ ಇನ್ನಿತರರು ಇಲ್ಲಿನ ಎಕೆಜಿ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ಯಾಲೆಸ್ಟೀನ್ ಜನರ ನರಮೇಧವನ್ನು ಖಂಡಿಸದ ಭಾರತ ಸರ್ಕಾರವು ನ್ಯಾಯಸಮ್ಮತವಲ್ಲದ ಮಾರ್ಗ ಅನುಸರಿಸುತ್ತಿದೆ. ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಹೊರಗುಳಿದಿರುವುದು ನಿಜವಾಗಿಯೂ ಆಘಾತಕಾರಿ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದರು.