HEALTH TIPS

ಈ ವರ್ಷ ಫ್ರೆಶರ್‌ಗಳ ನೇಮಕಾತಿ ಸ್ಥಗಿತಗೊಳಿಸಿದ ಇನ್ಫೋಸಿಸ್

                ಬೆಂಗಳೂರು: ದೇಶದ ಎರಡನೇ ಅತಿ ದೊಡ್ಡ ಐಟಿ ಸೇವೆಗಳ ಕಂಪನಿ ಇನ್ಫೋಸಿಸ್ ಈ ವರ್ಷ ಹೊಸಬರನ್ನು ನೇಮಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಗುರುವಾರ ಹೇಳಿದೆ.

             ಈ ವರ್ಷ ಕಂಪನಿಯು ಕ್ಯಾಂಪಸ್‌ ಸಂದರ್ಶನಗಳನ್ನು ನಡೆಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇನ್ಫೋಸಿಸ್ ಸಿಎಫ್‌ಒ ನಿಲಂಜನ್ ರಾಯ್ ಅವರು, "ಈ ವರ್ಷ ನೇಮಕಾತಿಗಾಗಿ ನಾವು ಕ್ಯಾಂಪಸ್‌ಗಳಿಗೆ ಹೋಗುವ ಸಾಧ್ಯತೆ ಇಲ್ಲ. ನಾವು ಭವಿಷ್ಯದ ಮುನ್ಸೂಚನೆಗಳನ್ನು ನೋಡುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

                "ನಾವು 7,000 ಉದ್ಯೋಗ ಕಡಿತವನ್ನು ಹೊಂದಿದ್ದೇವೆ. ಆದರೆ ನಮ್ಮ ಬಳಕೆಯು ಕೇವಲ 70 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ. ಆದ್ದರಿಂದ ನಾವು ಇನ್ನೂ ಬಳಕೆಗೆ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದ್ದೇವೆ" ಎಂದು ಅವರು ಹೇಳಿದ್ದಾರೆ.

                   ಕಂಪನಿಯ ಇತ್ತೀಚಿನ ಹೊಸಬರ ನೇಮಕಾತಿಯಲ್ಲಿ 50,000 ಕ್ಕೂ ಹೆಚ್ಚು ಜನ ತರಬೇತಿಗಾಗಿ ಮತ್ತು ಉದ್ಯೋಗ ಸ್ಥಳ ಪ್ರವೇಶಿಸಲು ಸಿದ್ಧವಾಗಿ ಕಳೆದ ವರ್ಷದಿಂದ ಕಾಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

                     ಸತತ ಆರನೇ ತ್ರೈಮಾಸಿಕದಲ್ಲೂ ಇನ್ಫೋಸಿಸ್ ನೇಮಕಾತಿಯಲ್ಲಿ ಕುಸಿತ ಕಂಡಿದೆ. ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಜೂನ್ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಉದ್ಯೋಗಿಗಳ ಸಂಖ್ಯೆ 6,940 ಕಡಿಮೆಯಾಗಿದೆ.

                   ಮಾರ್ಚ್ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಒಟ್ಟು 3,43,234 ಕ್ಕೆ ಉದ್ಯೋಗಿಗಳನ್ನು ಹೊಂದಿತ್ತು. ಆದರೆ ಆ ಸಂಖ್ಯೆ ಜೂನ್ 30, 2023ರ ವೇಳೆಗೆ 3,36,294ಕ್ಕೆ ಇಳಿದಿದೆ.


    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries