ಕಾಸರಗೋಡು: ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕøತಿಕ ಭವನ ಸಮಿತಿ ವತಿಯಿಂದ'ಕಾಸರಗೋಡು ದಸರಾ-2023'ಸಮಾರೋಪ ಹಾಗೂ ಯಕ್ಷಗಾನ ರಂಗಪ್ರವೇಶ ಕಾರ್ಯಕ್ರಮ ಅ. 29ರಂದು ಬೆಳಗ್ಗೆ 9.30ರಿಂದ ಕೋಟೆಕಣಿ ರಾಮನಾಥ ಸಾಂಸ್ಕøತಿಕ ಭವನದಲ್ಲಿ ಜರುಗಲಿದೆ.
ಬೆಳಗೆಗ9.30ಕ್ಕೆ ದೇವರ ನಾಮಾವಳಿ, 10ಕ್ಕೆ ದಸರಾ ಸಮಾರೋಪ ಸಮಾರಂಭ ನಡೆಯುವುದು. ಸಂಗೀತಗಾರ ಡಾ> ಶಂಕರ್‍ರಾಜ್ ಆಲಂಪಾಡಿ ದೀಪ ಪ್ರಜ್ವಲನಗೈಯುವರು. ಉಪನ್ಯಾಸಕಿ, ವಿದುಷಿ ಕಾವ್ಯಾಭಟ್ ಅವರಿಂದ ದಸರಾ ಮಹತ್ವದ ಬಗ್ಗೆ ಸಮಾರೋಪ ನುಡಿ ನಡೆಯುವುದು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅಧ್ಯಕ್ಷತೆ ವಹಿಸುವರು. ಕಮಲಾಕ್ಷ ಕಲ್ಲಗದ್ದೆ ಮುಖ್ಯ ಅತಿಥಿ ಹಾಗೂ ಸಂಗೀತ ವಿದ್ವಾನ್ ನಟರಾಜ ಶರ್ಮ ಬಳ್ಳಪದವು ಹಾಗೂ ಸಂಗೀತ ಗುರು ವಿದ್ವಾನ್ ಶಾಜಿ ಕುಮಾರ್ ಅತಿಥಿಗಳಾಗಿ ಭಾಗವಹಿಸುವರು.
11ರಿಂದ ನಾಟ್ಯಾಂಜಲಿ, ಸಂಗೀತಾರ್ಪಣೆ, ಮಧ್ಯಾಹ್ನ 1ಗಂಟೆಗೆ ಭಾವ-ಭಕ್ತಿಗೀತೆ-ಜಾನಪದ ಗಾಯನ ನಡೆಯುವುದು. 2.30ಕ್ಕೆ ಬಹುಭಾಷಾ ಕಾವ್ಯ ಸಂಗಮ ನಡೆಯುವುದು. ಕವಿ, ವ್ಯಂಗ್ಯಚಿತ್ರ ಕಲಾವಿದ ವೆಂಕಟ ಭಟ್ ಎಡನೀರು ಅಧ್ಯಕ್ಷತೆ ವಹಿಸುವರು.