ತಿರುವನಂತಪುರಂ: ರಾಜ್ಯ ಶಾಲಾ ಕಲಾ ಉತ್ಸವ 2024 ಜನವರಿ 4ರಿಂದ 8ರವರೆಗೆ ಕೊಲ್ಲಂ ಜಿಲ್ಲೆಯ 24 ಸ್ಥಳಗಳಲ್ಲಿ ನಡೆಯಲಿದೆ ಎಂದು ಸಚಿವ ವಿ. ಶಿವನ್ Àಕುಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
14 ವರ್ಷಗಳ ನಂತರ ಕೊಲ್ಲಂ ರಾಜ್ಯ ಕಲೋತ್ಸವಕ್ಕೆ ವೇದಿಕೆಯಾಗಲಿದೆ. ಇದರೊಂದಿಗೆ ದಿಶಾ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮಗಳೂ ನಡೆಯಲಿವೆ.
ಮುಖ್ಯ ವೇದಿಕೆ ಕೊಲ್ಲಂ ಆಶ್ರಮ ಮೈದಾನದಲ್ಲಿರಲಿದೆ. ಸುಮಾರು ಹನ್ನೆರಡು ಸಾವಿರ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸರ್ಕಾರಿ, ಅನುದಾನಿತ, ಸರ್ಕಾರಿ ಮಾನ್ಯತೆ ಪಡೆದ ಅನುದಾನ ರಹಿತ ಮತ್ತು ವಿಶೇಷ ಶಾಲೆಗಳ ವಿದ್ಯಾರ್ಥಿಗಳು ಮತ್ತು ವಿಕಲಚೇತನ ಸಾಮಾನ್ಯ ಶಾಲೆಗಳ ವಿದ್ಯಾರ್ಥಿಗಳಿಗೆ 24ನೇ ರಾಜ್ಯ ವಿಶೇಷ ಶಾಲಾ ಕಲಾ ಉತ್ಸವ 2023 ರ ನವೆಂಬರ್ 9 ರಿಂದ 11 ರವರೆಗೆ ಎರ್ನಾಕುಳಂ ಕಳಮಸ್ಸೆರಿ ಸರ್ಕಾರ ವಿಎಚ್ ಎಸ್ ಎಸ್ ನಲ್ಲಿ ನಡೆಯಲಿದೆ. ಸುಮಾರು 1600 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸಚಿವರು ಹೇಳಿದರು.
ಈ ತಿಂಗಳ 16 ರಿಂದ 20 ರವರೆಗೆ ತ್ರಿಶೂರ್ ಕುನ್ನಂಕುಳಂ ಸರ್ಕಾರಿ ಪೊಕೇಷನಲ್ ಹೈಯರ್ ಸೆಕೆಂಡರಿ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕ್ರೀಡಾ ಮೇಳಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಸಚಿವರು ಹೇಳಿದರು. ಮಕ್ಕಳ ರಾಷ್ಟ್ರೀಯ ಹವಾಮಾನ ಸಮ್ಮೇಳನ ಇಂದಿನಿಂದ(ಅ 16) 18 ರವರೆಗೆ ಕೇರಳ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಸಂಗ್ರಹಾಲಯ ಹಾಗೂ ಪ್ರಿಯದರ್ಶಿನಿ ತಾರಾಲಯದಲ್ಲಿ ನಡೆಯಲಿದೆ ಎಂದು ಸಚಿವರು ತಿಳಿಸಿದರು.