ವಾಷಿಂಗ್ಟನ್: ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರಿಂದ ದಾಳಿಗೆ ಒಳಗಾಗಿರುವ ಇಸ್ರೇಲ್ ರಾಷ್ಟ್ರವನ್ನು ಬೆಂಬಲಿಸಿ ಅಮೆರಿಕದಲ್ಲಿರುವ ಭಾರತೀಯರು ಷಿಕಾಗೊದಲ್ಲಿ ಶಾಂತಿಯುತ ಮೆರವಣಿಗೆ ನಡೆಸಿದರು.
ವಾಷಿಂಗ್ಟನ್: ಪ್ಯಾಲೆಸ್ಟೀನ್‌ನ ಹಮಾಸ್ ಬಂಡುಕೋರರಿಂದ ದಾಳಿಗೆ ಒಳಗಾಗಿರುವ ಇಸ್ರೇಲ್ ರಾಷ್ಟ್ರವನ್ನು ಬೆಂಬಲಿಸಿ ಅಮೆರಿಕದಲ್ಲಿರುವ ಭಾರತೀಯರು ಷಿಕಾಗೊದಲ್ಲಿ ಶಾಂತಿಯುತ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ಭಾರತ, ಅಮೆರಿಕ ಹಾಗೂ ಇಸ್ರೇಲ್‌ನ ಧ್ವಜಗಳನ್ನು ಪ್ರದರ್ಶಿಸಿದರು.
'ಭಯೋತ್ಪಾದನೆ ಕೇವಲ ಇಸ್ರೇಲ್‌ನ ಸಮಸ್ಯೆಯಲ್ಲ. ಇದು ಮನುಕುಲಕ್ಕೆ ದೊಡ್ಡ ಬಾಧೆ. ತಡವಾಗುವುದಕ್ಕಿಂತ ಮುಂಚೆ ಅದನ್ನು ನಿಲ್ಲಿಸಬೇಕಿದೆ' ಎಂದು ಇಂಡಿಯನ್ ಅಮೆರಿಕನ್ ಸಮುದಾಯದ ಸದಸ್ಯರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಶನಿವಾರ ಗಾಜಾ ಪಟ್ಟಿಯಿಂದ ಇಸ್ರೇಲ್ ಮೇಲೆ ಹಮಾಸ್ ಉಗ್ರರು ರಾಕೆಟ್ ದಾಳಿ ನಡೆಸಿದ್ದರು. ಪರಿಣಾಮ 1000ಕ್ಕೂ ಅಧಿಕ ಇಸ್ರೇಲಿಗರು ಸಾವಿಗೀಡಾಗಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿದ್ದ ಇಸ್ರೇಲ್, ಗಾಜಾದ ಮೇಲೆ ವಾಯುದಾಳಿ ನಡೆಸಿತ್ತು. ಇದರಲ್ಲಿ 830 ಮಂದಿ ಸಾವನ್ನಪ್ಪಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಈ ಸಂಕಷ್ಟದಲ್ಲಿ ಸಮಯದಲ್ಲಿ ಇಸ್ರೇಲ್ ಜತೆ ನಿಲ್ಲುವುದಾಗಿ ಹೇಳಿದ್ದಾರೆ.