HEALTH TIPS

ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ನೀವೇನು ಮಾಡಬೇಕು?

 ಇತ್ತೀಚೆಗೆ ಏಕೋ ನಿಮ್ಮ ಸಂಗಾತಿ ಮೊದಲಿನಂತೆ ಇಲ್ಲ. ತುಂಬಾ ಬೇಸರದಿಂದ ಇದ್ದಂತೆ ಕಾಣುತ್ತಾರೆ, ನೀವು ಏನಾದರೂ ಮಾತನಾಡಿದರೆ ಸಿಡುಕುತ್ತಾರೆ, ಚಿಕ್ಕ ವಿಷಯಕ್ಕೆ ಕಿರುಚಾಡಿ ದೊಡ್ಡ ರಂಪ ಮಾಡುತ್ತಾರೆ. ಕಾರಣವಿಲ್ಲದೆ ಅಳುತ್ತಾರೆ, ಯಾರ ಜೊತೆ ಬೆರೆಯುತ್ತಿಲ್ಲ ಈ ರೀತಿ ಸ್ವಭಾವದಲ್ಲಿ ತುಂಬಾ ಬದಲಾವಣೆ ಕಂಡು ಬಂದಾಗ ಅವರು ಏಕೆ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಸಿಟ್ಟಾಗಬೇಡಿ, ಈ ಸಮಯದಲ್ಲಿ ಅವರಿಗೆ ನಿಮ್ಮ ಅವಶ್ಯಕತೆ ತುಂಬಾನೇ ಇರುತ್ತದೆ, ಏಕೆಂದರೆ ಅವರು ಖಿನ್ನತೆಯಿಂದ ಬಳಲುತ್ತಿರಬಹುದು. ಅವರ ವರ್ತನೆ ನಿಮಗೆ ಕಿರಿಕಿರಿ ಆಯ್ತೆಂದು ನೀವು ಅವರನ್ನು ನಿರ್ಲಕ್ಷ್ಯ ಮಾಡಿದರೆ ಅವರು ಅವರು ಖಿನ್ನತೆಗೆ ಜಾರುವ ಸಾಧ್ಯತೆ ಹೆಚ್ಚುವುದು.

ಸಂಗಾತಿಯಲ್ಲಿ ಖಿನ್ನತೆಯ ಲಕ್ಷಣಗಳು ಕಂಡು ಬಂದರೆ ಈ ಪ್ರಯತ್ನ ಮಾಡಿದರೆ ಅವರನ್ನು ಖಿನ್ನತೆಯಿಂದ ಹೊರತರಬಹುದು, ನೀವಿಬ್ಬರು ಖುಷಿಯ ಜೀವನ ನಡೆಸಬಹುದು:

ಮೊದಲಿಗೆ ಖಿನ್ನತೆಯ ಬಗ್ಗೆ ತಿಳಿದುಕೊಳ್ಳಿ'
ಕೆಲವೊಮ್ಮೆ ಯಾವ ಕಾರಣದಿಂದ ಅವರು ಖಿನ್ನತೆಗೆ ಜಾರಿದ್ದಾರೆ ಎಂಬುವುದು ನಿಮಗೆ ತಿಳಿದಿರುತ್ತದೆ, ಇನ್ನು ಕೆಲವೊಮ್ಮೆ ನಿಖರ ಕಾರ್ಣ ನಿಮಗೆ ತಿಳಿದಿರುವುದಿಲ್ಲ, ಅವರು ಹೇಳಿರುವುದೂ ಇಲ್ಲಆದರೆ ಅವರು ಖಿನ್ನತೆಯಿಂದಲೇ ಬಳಲುತ್ತಿದ್ದಾರೆ ಎಂಬುವುದನ್ನು ಈ ಲಕ್ಷಣಗಳ ಮೂಲಕ ಕಂಡು ಹಿಡಿಯಬಹುದು
* ತುಂಬಾ ಬೇಸರದಿಂದ ಇರುವುದು, ಭರವಸೆ ಕಳೆದುಕೊಳ್ಳುವುದು
* ಹೊಟ್ಟೆ ಹಸಿವು ಇಲ್ಲದಿರುವುದು ಅಥವಾ ತುಂಬಾನೇ ತಿನ್ನುವುದು
* ನಿದ್ದೆ ಸರಿಯಾಗಿ ಮಾಡದಿರುವುದು
* ತಲೆಸುತ್ತು
* ಉದ್ವೇಗ
* ಅನಾವಶ್ಯಕವಾಗಿ ಕೋಪಗೊಳ್ಳುವುದು
* ಒಂದು ನಿರ್ಧಾರ ಸರಿಯಾಗಿ ತೆಗೆದುಕೊಳ್ಳಲು ಸಾಧ್ಯವಾಗದಿರುವುದು
* ಸಾವಿನ ಬಗ್ಗೆ ಮಾತನಾಡುವುದು
* ದೈಹಿಕವಾಗಿ ಕೆಲವು ಬದಲಾವಣೆ ಕಂಡು ಬರುವುದು

ಅವರಿಗೆ ಬೆಂಬಲ ನೀಡಿ
ಅವರಿಗೆ ಈ ಸಮಯದಲ್ಲಿ ನಾನು ಒಂಟಿ ಎಂದು ಅನಿಸುತ್ತಿರುತ್ತದೆ, ನೀವು ಅವರಿಗೆ ಬೆಂಬಲ ನೀಡಿ. ನಿಮಗೆ ಅವರ ಸಮಸ್ಯೆಗಳಿಗೆ ಪರಿಹಾರ ಕೊಡಲು ಸಾಧ್ಯವಾಗದಿರಬಹುದು, ಆದರೆ ಅವರ ಮಾತನ್ನು ಕೇಳಿ
* ಏನಾಯ್ತು, ನನ್ನ ಹತ್ರ ಹೇಳಿ
* ನನ್ನ ಜೀವನದಲ್ಲಿ ನೀವೇ ಎಲ್ಲ, ಏನೇ ಬರಲಿ ಜೊತೆಯಾಗಿ ಎದುರಿಸೋಣ
ಎಂಥದ್ದೇ ಪರಿಸ್ಥಿತಿ ಇರಲಿ ನಿಮ್ಮ ಜೊತೆ ಸದಾ ನಾನು ಇರುತ್ತೇನೆ ಎಂದು ಅವರಿಗೆ ಭರವಸೆ ನೀಡಿ.

ಚಿಕಿತ್ಸೆಗೆ ಕರೆದುಕೊಂಡು ಹೋಗಿ
ಅವರು ಚಿಕಿತ್ಸೆಗೆ ಬರಲು ಒಪ್ಪುವುದಿಲ್ಲ, ಆದರೆ ನೀವು ಮನವೊಲಿಸಿ, ಅವರಿಗೆ ಈ ಸಮಯದಲ್ಲಿ ಚಿಕಿತ್ಸೆ ನೀಡಬೇಕಾಗಿರುವುದು ಅನಿವಾರ್ಯ.
* ಅವರ ಜೊತೆ ಮಾತನಾಡಿ, ಅವರ ಔಷಧಗಳನ್ನು ಸರಿಯಾದ ಸಮಯಕ್ಕೆ ನೀಡಿ.

ಮನೆಯ ವಾತಾವರಣ ಲವಲವಿಕೆಯಿಂದ ಕೂಡಿರಲಿ
* ಮನೆಯ ವಾತಾವರಣವನ್ನು ಖುಷಿಯಿಂದ ಇಡಿ, ಅವರು ಬೇಸರದಲ್ಲಿದ್ದಾಗ ನೀವು ಬೇಸರದಿಂದ ಇರಬೇಡಿ, ಅವರಿಗೆ ಖುಷಿಯಾಗುವಂತೆ ನಡೆದುಕೊಳ್ಳಿ
* ವ್ಯಾಯಾಮ ಮಾಡಿಸಿ
* ಅವರಿಗೆ ಆರೋಗ್ಯಕರ ಆಹಾರ ನೀಡಿ
* ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳಿ.
* ಜೊತೆಯಾಗಿ ಭವಿಷ್ಯದ ಪ್ಲ್ಯಾನ್ ಮಾಡಿ
* ಅವರ ಜೊತೆ ಇರುವವರಿಗೂ ಅವರನ್ನು ಖುಷಿಯಾಗಿ ಇರುವಂತೆ ನೋಡಿಕೊಳ್ಳಲು ಹೇಳಿ. ಈ ಸಮಯದಲ್ಲಿ ಅವರ ಸ್ನೇಹಿತರ ಸಹಾಯ ಮಾಡಿ. ಎಷ್ಟೋ ಬಾರಿ ನಿಮ್ಮ ಬಳಿ ಹಂಚಿಕೊಳ್ಳದ ವಿಷಯ ಅವರ ಬಳಿ ಹಂಚಿಕೊಂಡು ಮನಸ್ಸು ಹಗುರ ಮಾಡಬಹುದು.

ಇವೆಲ್ಲಾ ಆತ್ಮಹತ್ಯೆಯ ಸೂಚನೆಗಳು, ಆದ್ದರಿಂದ ನಿರ್ಲಕ್ಷ್ಯ ಮಾಡಬೇಡಿ
* ಆತ್ಮಹತ್ಯೆಯ ಮಾತು ಬರುವುದು
* ಆತ್ಮಹತ್ಯೆಗೆ ಯತ್ನಿಸುವುದು
* ಸಾಮಾಜಿಕವಾಗಿ ಬೆರೆಯದೆ ಇರುವುದು
* ಅವರ ದಿನಚರಿಯಲ್ಲಿ ಬದಲಾವಣೆ ಕಂಡು ಬರುವುದು
* ಅತಿಯಾಗಿ ಕುಡಿಯುವುದು ಅಥವಾ ಸ್ವನಾಶದ ಮಾರ್ಗ ಅನುಸರಿಸುವುದು
* ತನ್ನ ವಸ್ತುಗಳ ಕಡೆ ಗಮನಹರಿಸದಿರುವುದು
* ನಾನು ಇಲ್ಲದಿದ್ದಾಗ ಏನಾಗಬೇಕೆಂಬ ಸಿದ್ಧತೆ ಮಾಡಿಕೊಳ್ಳುವುದು

ಅವರಲ್ಲಿನ ಖಿನ್ನತೆ ಹೋಗಲಾಡಿಸುವುದು ಹೇಗೆ?
* ಚಿಕಿತ್ಸೆಯ ಜೊತೆಗೆ ಅವರ ಮಾತುಗಳನ್ನು ಕೇಳಿ
* ಅವರ ಮಾತಿಗೆ ವಿರುದ್ಧವಾಗಿ ಏನನ್ನೂ ಹೇಳಲು ಹೋಗಬೇಡಿ
* ಅವರನ್ನು ಸಮಧಾನ ಪಡಿಸಿ
* ಅವರ ಜೊತೆ ಸದಾ ನೀವು ಇರುತ್ತೀರಿ ಎಂಬ ಬೆಂಬಲ ನೀಡಿ
* ಅವರ ಜೊತೆ ಪ್ರೀತಿಯಿಂದ ವರ್ತಿಸಿ
* ಅವರನ್ನು ಮೊದಲಿಗಿಂತಲೂ ಹೆಚ್ಚಾಗಿ ಆರೈಕೆ ಮಾಡಿ. ಹೀಗೆ ಮಾಡುವುದರಿಂದ ಅವರನ್ನು ಖಿನ್ನತೆಯಿಂದ ಹೊರಬರಲು ಸಹಾರ ಮಾಡಿ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries