ಇಂದೋರ್: ತಮ್ಮ ಹೆಸರಿನಲ್ಲಿ ಲೇಖನಗಳನ್ನು ಬರೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜನರಿಗೆ ಹಣ ನೀಡುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯಾ ಆರೋಪಿಸಿದ್ದಾರೆ.
ಇಂದೋರ್: ತಮ್ಮ ಹೆಸರಿನಲ್ಲಿ ಲೇಖನಗಳನ್ನು ಬರೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜನರಿಗೆ ಹಣ ನೀಡುತ್ತಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯಾ ಆರೋಪಿಸಿದ್ದಾರೆ.
'ಸತ್ಯಂ ಶಿವಂ ಸುಂದರಂ' ಎಂಬ ತಲೆಬರಹದಡಿ ಹಿಂದೂ ಧರ್ಮದ ಕುರಿತು ವಿಶ್ಲೇಷತ್ಮಾಕ ಲೇಖನವೊಂದನ್ನು ಬರೆದಿರುವ ರಾಹುಲ್ ಗಾಂಧಿ, ಅದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ರಾಹುಲ್ ಗಾಂಧಿ ಲೇಖನದ ಕುರಿತು ಪ್ರತಿಕ್ರಿಯಿಸಿದ ವಿಜಯವರ್ಗೀಯಾ , 'ಲೇಖನಗಳನ್ನು ಬರೆಯುವ ಸಲುವಾಗಿಯೇ ರಾಹುಲ್ ಗಾಂಧಿ ಹಣ ನೀಡಿ ಲೇಖಕರನ್ನು ನೇಮಿಸಿಕೊಂಡಿದ್ದಾರೆ' ಎಂದರು.
ರಾಹುಲ್ ಗಾಂಧಿಯನ್ನು ಯಾರೂ ಗಂಭೀರವಾಗಿ ಪರಿಗಣಿಸದ ಕಾರಣ ಅವರ ಮಾತಾಗಲಿ, ಲೇಖನಗಳಾಗಲಿ ಸಮಾಜದಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದು ಹೇಳಿದರು.