ಕೋಲ್ಕತ್ತ: ನವರಾತ್ರಿಯ ದುರ್ಗಾ ಪೂಜೆ ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ಆಚರಣೆಗೊಳ್ಳುತ್ತಿದ್ದು, ದುರ್ಗಾದೇವಿ ಪ್ರತಿಷ್ಠಾಪಿಸಲಾಗಿರುವ ಪೆಂಡಾಲುಗಳು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.
ಕೋಲ್ಕತ್ತ: ನವರಾತ್ರಿಯ ದುರ್ಗಾ ಪೂಜೆ ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ಆಚರಣೆಗೊಳ್ಳುತ್ತಿದ್ದು, ದುರ್ಗಾದೇವಿ ಪ್ರತಿಷ್ಠಾಪಿಸಲಾಗಿರುವ ಪೆಂಡಾಲುಗಳು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.
ಕಳೆದ ಗಣೇಶ ಚತುರ್ಥಿಯ ಸಂದರ್ಭದಲ್ಲೂ ಕಾಂತಾರಾ ಚಿತ್ರದ ಥೀಮ್ ಹಲವು ಪೆಂಡಾಲ್‌ಗಳಲ್ಲಿ ರಾರಾಜಿಸಿತ್ತು. ಇದೀಗ ನವರಾತ್ರಿ ಸಂದರ್ಭದಲ್ಲೂ ದುರ್ಗಾದೇವಿ ಪೆಂಡಾಲಿನ ಅಲಂಕಾರಕ್ಕೂ ಕಾಂತಾರಾ ಸಿನಿಮಾದ ಥೀಮ್ ಬಳಸಲಾಗಿದೆ.
ಕೋಲದ ಸಂದರ್ಭ, ಮುಖವರ್ಣಿಕೆ, ಉಡುಪು ತೊಡುಪು, ಬೆನ್ನ ಹಿಂದೆ ಕಟ್ಟಿಕೊಳ್ಳುವ ಅಗಲವಾದ ರಚನೆಯಾದ ಅಣಿಯನ್ನು ಬಳಸಲಾಗಿದೆ. ದುರ್ಗಾ ದೇವಿಯನ್ನು ಪಂಜುರ್ಲಿಯ ದೈವದ ರೂಪದಲ್ಲಿ ಸಿದ್ಧಪಡಿಸಿ ಕೊಲ್ಕತ್ತಾದಲ್ಲಿ ಪೂಜಿಸಲಾಗುತ್ತಿದೆ. ಇದರ ಚಿತ್ರಗಳು ಮೈಕ್ರೊ ಬ್ಲಾಗಿಂಗ್ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.