HEALTH TIPS

ಶಿಕ್ಷಕ ಶಿಕ್ಷಣ ಬದಲಾವಣೆ ದಿಶೆಯಲ್ಲಿ: ಕನಿಷ್ಠ ವಿದ್ಯಾರ್ಹತೆ ಪದವಿ, ಡಿ.ಎಲ್.ಇಡಿ., ಬಿ.ಎಡ್. ಕೋರ್ಸ್‍ಗಳು ಸ್ಥಗಿತ?

                

                    ತಿರುವನಂತಪುರಂ: ಪಠ್ಯಕ್ರಮ ಸುಧಾರಣೆಯ ಜೊತೆಗೆ ರಾಜ್ಯದಲ್ಲಿ ಶಿಕ್ಷಕರ ಶಿಕ್ಷಣವೂ(ಟಿಟಿಸಿ/ಡಿ.ಎಲ್.ಇ.ಡಿ, ಬಿ.ಎಡ್.) ಆಮೂಲಾಗ್ರ ಬದಲಾವಣೆಗೆ ಒಳಗಾಗಲಿದೆ. ಕೇಂದ್ರದ ನಿರ್ದೇಶನದ ಅನ್ವಯ ಶಿಕ್ಷಕರಾಗಲು ಕನಿಷ್ಠ ವಿದ್ಯಾರ್ಹತೆ ಪದವಿಯಾಗಿದೆ.

                   ಕೇರಳದಲ್ಲಿ ಶಿಕ್ಷಕರ ಪದವಿ ಪ್ರವೇಶಕ್ಕಾಗಿ ಪ್ರತ್ಯೇಕ ಸಾಮಥ್ರ್ಯ ಪರೀಕ್ಷೆಯನ್ನು ಸಹ ಪರಿಚಯಿಸಲಾಗುವುದು. ಇದರಿಂದ ಬೋಧನೆಯಲ್ಲಿ ಆಸಕ್ತಿ ಇರುವವರು ಮಾತ್ರ ವ್ಯಾಸಂಗಗೈಯ್ಯಲಿದ್ದಾರೆ. 

                 ಪ್ರಸ್ತುತ ಡಿ.ಎಲ್.ಇ.ಡಿ, ಬಿ.ಎಡ್. ಕೋರ್ಸ್‍ಗಳನ್ನು ತೊಡೆದುಹಾಕಲು ಮತ್ತು ಸಮಗ್ರ ಪದವಿಯನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ. ಪ್ರವೇಶಕ್ಕಾಗಿ ಆಪ್ಟಿಟ್ಯೂಡ್ ಪರೀಕ್ಷೆ ನಡೆಯಲಿದೆ. ಅಂತಹ ಶಿಫಾರಸುಗಳೊಂದಿಗೆ ಶಿಕ್ಷಕರ ಶಿಕ್ಷಣದ ಕುರಿತು ಎಸ್.ಸಿ.ಇ.ಆರ್.ಟಿ. ವರದಿ ತಯಾರಿಸಲಾಗಿದೆ. ಶೀಘ್ರವೇ ಸರ್ಕಾರಕ್ಕೆ ಸಲ್ಲಿಸಲಾಗುವುದು.

               ಬೋಧನಾ ಪದವಿಯನ್ನು ನಾಲ್ಕು ವರ್ಷಗಳ ಕೋರ್ಸ್ ಮಾಡಿ ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮವನ್ನು ಜಾರಿಗೆ ತರುವುದು ಕೇಂದ್ರದ ನಿರ್ದೇಶನವಾಗಿದೆ. ಶಾಲಾ ಶಿಕ್ಷಣವನ್ನು 5+3+3+4 ಎಂದು ರಚನೆ ಮಾಡಬೇಕು ಎಂದೂ ಸೂಚಿಸಲಾಗಿದೆ. ಕೇರಳ ಈವರೆಗೂ ಕೇಂದ್ರ ರಚನೆಯನ್ನು ಅಳವಡಿಸಿಕೊಂಡಿಲ್ಲ. ಆದ್ದರಿಂದ ಪ್ರಿ-ಸ್ಕೂಲ್‍ನಿಂದ ಹೈಯರ್ ಸೆಕೆಂಡರಿ, ಶಿಕ್ಷಕರ ಪದವಿ ಕೋರ್ಸ್‍ಗಳನ್ನು ಮೂರು ವಿಭಾಗಗಳಲ್ಲಿ ಜಾರಿಗೊಳಿಸಬೇಕು. ಕೋರ್ಸ್‍ಗಳಿಗೆ ಪ್ರವೇಶವನ್ನು ಪ್ರತ್ಯೇಕ ಸಾಮಥ್ರ್ಯ ಪರೀಕ್ಷೆಯ ಮೂಲಕ ನಡೆಸಲಾಗುತ್ತದೆ.

          ಶಾಲಾ ಶಿಕ್ಷಣದ ಬಗ್ಗೆ ಅಧ್ಯಯನ ನಡೆಸಿದ ಖಾದರ್ ಸಮಿತಿಯೂ ಶಿಕ್ಷಕರಾಗಲು ಕನಿಷ್ಠ ವಿದ್ಯಾರ್ಹತೆಯನ್ನು ಪದವಿಯಾಗಿ ನಿಗದಿಪಡಿಸಬೇಕು ಎಂದು ಶಿಫಾರಸು ಮಾಡಿದೆ. ಈ ಸಮಿತಿಯು ಆಪ್ಟಿಟ್ಯೂಡ್ ಟೆಸ್ಟ್ ಪರಿಕಲ್ಪನೆಯನ್ನೂ ಪ್ರಸ್ತಾಪಿಸಿದೆ. ಎಸ್.ಸಿ.ಇ.ಆರ್.ಟಿ. ಇದೆಲ್ಲವನ್ನೂ ಪರಿಗಣಿಸಿದೆ. ಸÀರ್ಕಾರಕ್ಕೆ ವರದಿ ಸಲ್ಲಿಸಿದೆ.

               ಕೇಂದ್ರ ನಿರ್ದೇಶನ:

             ಬಿ.ಎ.-ಬಿಎಡ್, ಬಿ.ಎಸ್.ಸಿ-ಬಿಎಡ್, ಬಿ.ಕಾಂ.-ಬಿ.ಎಡ್ ಎಂಬಂತೆ ಮೂರು ರೀತಿಯ ಕೋರ್ಸ್‍ಗಳಿವೆ.

             ಫೌಂಡೇಶನ್, ಪ್ರಿಪರೇಟರಿ, ಮಿಡ್ಲ್ ಮತ್ತು ಸೆಕೆಂಡರಿ ಎಂಬ ನಾಲ್ಕು ಹಂತಗಳಿಗೆ ಪ್ರತ್ಯೇಕ ಕೋರ್ಸ್‍ಗಳು ಇರಲಿವೆ.

             ಎಂಟು ಸೆಮಿಸ್ಟರ್‍ಗಳನ್ನು ಒಳಗೊಂಡಿರುವ ನಾಲ್ಕು ವರ್ಷಗಳ ಪದವಿ. ಒಂದು ಸೆಮಿಸ್ಟರ್‍ನಲ್ಲಿ ಕನಿಷ್ಠ 96 ಕೆಲಸದ ದಿನಗಳು. 160 ಕ್ರೆಡಿಟ್‍ಗಳು ಇರಲಿವೆ.

                              ಅಧ್ಯಯನ ಕೇಂದ್ರಗಳ ಸ್ಥಳಾಂತರ ಅಥವಾ ಮುಚ್ಚುಗಡೆ: 

            ಹೊಸ ಸುಧಾರಣೆಯಿಂದ ಈಗಿರುವ ಡಿ.ಎಲ್.ಇಡಿ., ಬಿ.ಎಡ್. ಕೋರ್ಸ್‍ಗಳು ಕಣ್ಮರೆಯಾಗುತ್ತವೆ. ರಾಜ್ಯದಲ್ಲಿ 202 ಡಿ.ಎಲ್.ಇಡಿ. ಕೇಂದ್ರಗಳಿವೆ. ಅವುಗಳೆಂದರೆ ಸರ್ಕಾರ-38, ನೆರವು-64 ಮತ್ತು ಸಹಕಾರಿ ವಲಯ-100. ಸರ್ಕಾರದ ನಾಲ್ಕು ಸೇರಿದಂತೆ 187 ಬಿ.ಎಡ್. ಸಂಸ್ಥೆಗಳಿವೆ.

              ಹೊಸ ಪ್ರಸ್ತಾವನೆ ಜಾರಿಯಾದರೆ ಡಿ.ಎಲ್.ಇಡಿ. ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ. ಸಂಸ್ಥೆಗಳು ಕೇವಲ ಕಲಿಕೆಗಾಗಿ ಇರಬಾರದು. ಬದಲಾಗಿ, ಬಹುಶಿಸ್ತೀಯ ಬೋಧನಾ ಕೇಂದ್ರವಾಗಿ ಪರಿವರ್ತಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಇದರೊಂದಿಗೆ ಬಿ.ಎಡ್. ಕೇಂದ್ರಗಳನ್ನು ಇತರೆ ಕಾಲೇಜುಗಳೊಂದಿಗೆ ವಿಲೀನಗೊಳಿಸಬೇಕು. ಇಲ್ಲದವರಿಗೆ ಮುಚ್ಚಬೇಕಾಗಿ ಬರಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries