ಕಾಸರಗೋಡು: ಕೇಂದ್ರ ಶುಚಿತ್ವ ಮತ್ತು ಜಲ ಸಚಿವಾಲಯದ ನಿರ್ದೇಶನದನ್ವಯ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಜಿಲ್ಲೆಯ ವಿವಿಧ ಕಚೇರಿಗಳು ಮತ್ತು ಆವರಣಗಳನ್ನು ಶುಚಿಗೊಳಿಸಲಾಯಿತು.
ಗಾಂಧಿ ಜಯಂತಿಯ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯಿತಿ, ನಗರಸಭೆ ಮತ್ತು ಬ್ಲಾಕ್-ಜಿಲ್ಲಾ ಪಂಚಾಯಿತಿಗಳನ್ನೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದು, ಜಿಲ್ಲಾದ್ಯಂತ ಶುಚೀಕರಣಕಾರ್ಯ ನಡೆಸಲಾಗುತ್ತಿದೆ. ಸಿವಿಲ್ ಸ್ಟೇಶನ್‍ನ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದವು. ಕಾರ್ಯಕ್ರಮದಲ್ಲಿ ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕಿ ಎ.ಲಕ್ಷ್ಮಿ ಉದ್ಘಾಟಿಸಿದರು. ನಗರ ಯೋಜನಾಧಿಕಾರಿ ಲಿಲಿಟಿ ಥಾಮಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ, ನವಕೇರಳ ಮಿಷನ್, ಯೋಜನಾ ಕಚೇರಿ, ಶುಚಿತ್ವ ಮಿಷನ್ ಸೇರಿದಂತೆ ವಿವಿಧ ಕಚೇರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಮಾಹಿತಿ ಕಚೇರಿಯಲ್ಲೂ ಸ್ವಚ್ಛತಾ ಕಾರ್ಯಕ್ರಮಗಳು ನಡೆಯಿತು.