ಬದಿಯಡ್ಕ: ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆಯ ಅಂಗವಾಗಿ ಹುತಾತ್ಮ ಯೋಧರಿಗೆ ಗೌರವ ಸೂಚಕವಾಗಿ ರಾಷ್ಟ್ರ ರಾಜಧಾನಿಯಲ್ಲಿ ಅಮೃತ ಉದ್ಯಾನವನ್ನು ರಚಿಸುವ ಗುರಿಯನ್ನು ಹೊಂದಿರುವ ಅಭಿಯಾನದ ಅಂಗವಾಗಿ ನೀರ್ಚಾಲಲ್ಲಿ ಲೀಡ್ ಬ್ಯಾಂಕ್ ನೇತೃತ್ವದಲ್ಲಿ ಅಮೃತ ಕಲಶ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಸೈನಿಕ ಕೃಷ್ಣ ನಾಯ್ಕ ಮಲ್ಲಡ್ಕ ಉದ್ಘಾಟಿಸಿದರು.ಎಸ್.ಬಿ.ಐ. ಬ್ಯಾಂಕಿನ ನಿವೃತ್ತ ಅಧಿಕಾರಿ ಬಾಲಕೃಷ್ಣ, ಹಿರಿಯ ನಾಗರಿಕರಾದ ಶಿವಪ್ಪ ನಾಯ್ಕ ಓಣಿಯಡ್ಕ, ಬಾಲಕೃಷ್ಣ ದೊಡ್ಡಮೂಲೆ ಮುಖ್ಯ ಅತಿಥಿಗಳಾಗಿದ್ದು ಶುಭಹಾರೈಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ಥಳೀಯ ಸ್ವಸಹಾಯ ಸಂಘಟನೆಗಳ ಒಕ್ಕೂಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲೀಡ್ ಬ್ಯಾಂಕ್ ಕಾಸರಗೋಡು ವಲಯ ಪ್ರಬಂಧಕ ಬಿಮಲ್ ಎನ್.ವಿ.ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಲೀಡ್ ಬ್ಯಾಂಕ್ ಅಧಿಕಾರಿ ಹರೀಶ್ ಪುದುಕೋಳಿ ನೇತೃತ್ವ ವಹಿಸಿ ವಂದಿಸಿದರು.