ಕಾಸರಗೋಡು: ಜಿಲ್ಲೆಯ ಕಾಲೇಜು ಯೂನಿಯನ್‍ಗೆ ನಡೆದ ಚುನಾವಣೆಯಲ್ಲಿ ಎಡರಂಗ ಬೆಂಬಲಿತ ಎಸ್‍ಎಫ್‍ಐ ವಿದ್ಯಾರ್ಥಿ ಸಂಘಟನೆ 19ರಲ್ಲಿ 11 ಕಾಲೇಜುಗಳಲ್ಲಿ ಗೆಲುವು ಸಾಧಿಸಿದೆ. ಏಳರಲ್ಲಿ ಎಂಎಸ್‍ಎಫ್-ಕೆಎಸ್‍ಯೂ ಒಕ್ಕೂಟ ಜಯಗಳಿಸಿದರೆ, ಎರಡರಲ್ಲಿ ಎಬಿವಿಪಿ ಗೆಲುವು ಸಾಧಿಸಿದೆ.
ಮುನ್ನಾಡ್ ಪೀಪಲ್ ಕಾಲೇಜು, ಪೆರಿಯ, ಕಾಞಂಗಾಡು ನೆಹರೂ ಕಾಲೇಜಿನಲ್ಲಿ ಎಲ್ಲ ಸೀಟುಗಳಲ್ಲೂ ಎಸ್‍ಎಫ್‍ಐ ಗೆಲುವು ಸಾಧಿಸಿದೆ. ಕಾಸರಗೋಡು ಸರ್ಕಾರಿ ಕಾಲೇಜು, ಕಾಞಂಗಾಡು ಸಿ.ಕೆ ನಾಯರ್ ಕಾಲೇಜು ಸೇರಿದಂತೆ ಒಟ್ಟು ಏಳು ಕಾಲೇಜುಗಳಲ್ಲಿ ಎಂಎಸ್‍ಎಫ್-ಕೆಎಸ್‍ಯೂ ಒಕ್ಕೂಟ, ಕುಂಬಳೆಯ ಐಎಚ್‍ಆರ್‍ಡಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ ಎಬಿವಿಪಿ ಗೆಲುವು ಸಾಧಿಸಿದೆ. ಅಲ್ಲದೆ ರಾಜಾಪುರಂ ಸೈಂಟ್ ಪಯಸ್ ಕಾಲೇಝಿನ ಫಿಸಿಕ್ಸ್ ಅಸೋಸಿಯೇಶನ್, ಕಾಸರಗೊಡು ಸರ್ಕಾರಿ ಕಾಲೇಜಿನ ಕನ್ನಡ ಅಸೋಸಿಯೇಶನ್‍ನಲ್ಲಿ ಎಬಿವಿಪಿ ಗೆಲುವು ಸಾಧಿಸಿದೆ.
: ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಎಂಎಸ್‍ಎಫ್-ಕೆಎಸ್‍ಯೂ ಒಕ್ಕೂಟ ಕಾರ್ಯಕತ್ರು ವಿಜಯೋತ್ಸವ ನಡೆಸಿದರು.