HEALTH TIPS

ಜಾಗತಿಕ ಕಡಲ ಶೃಂಗಸಭೆಗೆ ಮೋದಿ ಚಾಲನೆ

              ಮುಂಬೈ: ದೀರ್ಘಾವಧಿಯಲ್ಲಿ ದೇಶದ ಕಡಲ ಆರ್ಥಿಕತೆಗೆ ಬಲ ನೀಡುವ ನಿಟ್ಟಿನಲ್ಲಿ ₹23 ಸಾವಿರ ಕೋಟಿ ಮೊತ್ತದ ಸಮುದ್ರಯಾನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

             ಬಂದರು ಅಭಿವೃದ್ಧಿ, ಸುಸ್ಥಿರ ಬಳಕೆಗೆ ಉತ್ತೇಜನ ಹಾಗೂ ಅಂತರರಾಷ್ಟ್ರೀಯ ಸಹಯೋಗವನ್ನು ಸುಗಮಗೊಳಿಸುವ ಕಾರ್ಯತಂತ್ರದ ಉಪಕ್ರಮಗಳಿಗೆ ಅನು ಗುಣ ವಾಗಿ ಈ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

               ಮಂಗಳವಾರದಿಂದ ಮೂರು ದಿನಗಳ ಕಾಲ ನಡೆಯುವ ಮೂರನೇ ಆವೃತ್ತಿಯ ಜಾಗತಿಕ ಕಡಲ ಭಾರತ ಶೃಂಗಸಭೆಗೆ ಮೋದಿ ಅವರು ವರ್ಚುವಲ್‌ ಆಗಿ ಚಾಲನೆ ನೀಡಿದರು.

               ಸಮುದ್ರಯಾನ ಕ್ಷೇತ್ರಕ್ಕೆ ಸಂಬಂಧಿಸಿ ದಂತೆ ಬಂದರುಗಳ ಭವಿಷ್ಯ, ಇಂಗಾಲದ ಡೈಆಕ್ಸೈಡ್‌ ಹೊರಸೂಸುವಿಕೆ ಪ್ರಮಾಣ ತಗ್ಗಿಸುವಿಕೆ, ಕರಾವಳಿ ಪ್ರದೇಶದಲ್ಲಿ ಹಡಗುಗಳ ರವಾನೆ, ಒಳನಾಡು ಜಲಸಾರಿಗೆ ಸೇರಿದಂತೆ ಹಲವು ವಿಷಯ‌ಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಲಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries