ಸಮರಸ ಚಿತ್ರಸುದ್ದಿ: ಪೆರ್ಲ: ಬದಿಯಡ್ಕದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಕ್ರೀಡಾ ಕೂಟದ ಜ್ಯೂ. ಹುಡುಗಿಯರ ವಿಭಾಗದ ಜಾವಲಿನ್ ಎಸೆತ ಸ್ಪರ್ಧೆಯಲ್ಲಿ ಆಯಿಷತ್ ಮುಬಾಸಿರ ಪ್ರಥಮ ಸ್ಥಾನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಶೇಣಿ ಶ್ರೀಶಾರದಾಂಬ ಪ್ರೌಢ ಶಾಲಾ ವಿದ್ಯಾರ್ಥಿನಿಯಾಗಿದ್ದು ಶಾಲಾ ಶಿಕ್ಷಕ ರಕ್ಷಕ ಸಂಘ,ಅಧ್ಯಾಪಕ ವೃಂದ, ಆಡಳಿತ ಸಮಿತಿ ಈಕೆಯನ್ನು ಅಭಿನಂದಿಸಿದೆ.