ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಗೆ ಮಂಗಳೂರು ಎಂಆರ್‍ಪಿಎಲ್‍ನ ಸಿಎಸ್‍ಆರ್ ಫಂಡ್ ಮೂಲಕ ಮಂಜೂರುಗೊಳಿಸಿರುವ ಹತ್ತುಲಕ್ಷ ರೂ. ಮೊತ್ತದಲ್ಲಿ ನಿರ್ಮಿಸಲುದ್ದೇಶಿಸಿದ ಶೌಚಗೃಹ ಸಂಕೀರ್ಣ ನಿರ್ಮಾಣದ ಭೂಮಿಪೂಜಾ ಮಹೋತ್ಸವ ಶಾಲಾ ವಠಾರದಲ್ಲಿ ಜರುಗಿತು.
ಪುರೋಹಿತರಾದ ಕೇಶವ ಭಟ್ ಶುಳುವಾಲುಮೂಲೆ ಮತ್ತು ಗಣೇಶ್ ಭಟ್ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಿತು. ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳಾದ ಸದಾಶಿವ ಭಟ್ ಹರಿನಿಲಯ, ವೆಂಕಟ್ರಾಜ ಮಿತ್ರ, ಶಾಲಾ ಮುಖ್ಯ ಶಿಕ್ಷಕ ಬಿ. ರಾಜೇಂದ್ರ, ಹಿರಿಯ ಶಿಕ್ಷಕ ಕೇಶವಪ್ರಕಾಶ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ, ಕೃಷ್ಣಪ್ರಕಾಶ್ ಬನಾರಿ, ಇಂಜಿನಿಯರ್ ಶ್ರೀನಿವಾಸ ಪೈ ಪೆರ್ಲ ಉಪಸ್ಥಿತರಿದ್ದರು.