ಕಣ್ಣೂರು: ಸಿಎನ್‌ಜಿ ಆಟೊ ರಿಕ್ಷಾ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನವಾದ ಘಟನೆ ಕಣ್ಣೂರಿನ ಕದಿರೂರಿನಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಣ್ಣೂರು: ಸಿಎನ್‌ಜಿ ಆಟೊ ರಿಕ್ಷಾ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನವಾದ ಘಟನೆ ಕಣ್ಣೂರಿನ ಕದಿರೂರಿನಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಸುಮಾರು 8.30ಕ್ಕೆ ಘಟನೆ ನಡೆದಿದ್ದು, ಆಟೊ ಚಾಲಕ ಅಭಿಲಾಷ್ (37) ಹಾಗೂ ಆತನ ಸ್ನೇಹಿತ ಸೈಜೇಶ್ (36) ಮೃತಪಟ್ಟವರು.
ಆಟೊ ರಿಕ್ಷಾ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ನಡೆದಿದ್ದು, ಬೆಂಕಿ ಹೊತ್ತಿಕೊಳ್ಳುವುದಕ್ಕೂ ಮುನ್ನ ರಿಕ್ಷಾ ಪಲ್ಟಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಲಿಂಡರ್‌ನಿಂದ ಬೆಂಕಿ ಹತ್ತಿಕೊಂಡಿದ್ದು, ಇಡೀ ಆಟೊಗೆ ಹಬ್ಬಿತು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಬೆಂಕಿಯಿಂದಾಗಿ ಸ್ಥಳೀಯರು ಆಟೊದ ಬಳಿ ಹೋಗಲು ಆಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ, ಬೆಂಕಿ ನಂದಿಸಿದೆ. ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.