ಮುಳ್ಳೇರಿಯ: ಕಾರಡ್ಕ ಬ್ಲಾಕ್ ಪಂಚಾಯತಿ ಮಹಾತ್ಮ ಗಾಂಧಿ ದೇಶೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಕುಟುಂಬಶ್ರೀ ವತಿಯಿಂದ ಬೆಳ್ಳೂರು, ಕಾರಡ್ಕ ಮತ್ತು ಕುಂಬ್ಡಾಜೆ ಪಂಚಾಯತಿ ವ್ಯಾಪ್ತಿಯ ಕಾರ್ಮಿಕರಿಗೆ ಉನ್ನತಿ ಓರಿಯಂಟೇಶನ್ ಶಿಬಿರ ಕಾರಡ್ಕ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದÀಲ್ಲಿ ಆಯೋಜಿಸಲಾಗಿತ್ತು.
ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಉದ್ಘಾಟಿಸಿದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ಮಿತಾ ಪ್ರಿಯರಂಜನ್ ಅಧ್ಯಕ್ಷತೆ ವಹಿಸಿದ್ದರು. ಆರ್.ಎಸ್.ಇ.ಟಿ.ಐ ಸಂಸ್ಥೆಯ ನಿರ್ದೇಶಕ ಗೋಪಿ ಮತ್ತು ಡಿಟಿಸಿ ಫ್ಯಾಕಲ್ಟಿ ಪ್ರಮೀಳಾ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿದರು. ಜಂಟಿ ಬಿಡಿಒ ಎನ್.ಎ. ಮಜೀದ್ ಸ್ವಾಗತಿಸಿ, ಎನ್.ಆರ್.ಇ.ಜಿ.ಎಸ್. ಬ್ಲಾಕ್ ಅಭಿಯಂತರ ಪ್ರದೀಪ್ ವಂದಿಸಿದರು. ಬಿಡಿಒ ಮೃದುಲಾ, ಬ್ಲಾಕ್ ಮಟ್ಟದ ವಿಸ್ತರಣಾಧಿಕಾರಿಗಳು, ವಿಇಒ, ಎನ್.ಆರ್.ಇ.ಜಿ.ಎಸ್. ಸಿಬ್ಬಂದಿ ಸಹಿತ 100ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.