HEALTH TIPS

ಮಾಲ್ಡೀವ್ಸ್‌ನಲ್ಲಿ ಸ್ಫೋಟ: ಇಬ್ಬರು ಭಾರತೀಯ ಕಾರ್ಮಿಕರ ಸಾವು

             ಮಾಲೆ: ಮಾಲ್ಡೀವ್ಸ್‌ನ ಹಾ ಧಾಲ್ ಮಕುನುಧೂ ದ್ವೀಪದ ಮೀನು ಮಾರುಕಟ್ಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಇಬ್ಬರು ಭಾರತೀಯ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಮಾಲೆಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಭಾನುವಾರ ತಿಳಿಸಿದೆ.

             ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಭಾರತೀಯ ಹೈಕಮೀಷನ್, ಇಬ್ಬರು ಭಾರತೀಯರು ಸಾವನ್ನಪ್ಪಿದ ದುರಂತ ಘಟನೆಯಿಂದ  ತೀವ್ರ ದುಃಖಿತರಾಗಿದ್ದೇವೆ. ಮೃತರ ಕುಟುಂಬಗಳೊಂದಿಗೆ  ಮಾಲ್ಡೀವ್ಸ್ ನಲ್ಲಿರುವ ರಾಯಭಾರಿ ಅಧಿಕಾರಿಗಳು ನಿಕಟ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದೆ.

               ಶನಿವಾರ ಸಂಜೆ 04:15 ರ ಸುಮಾರಿಗೆ ದ್ವೀಪದ ಬಂದರಿನ ದಕ್ಷಿಣ ತುದಿಯಲ್ಲಿರುವ ಮೀನು ಮಾರುಕಟ್ಟೆಯ ಬಳಿ ಸ್ಫೋಟ ಸಂಭವಿಸಿದೆ ಎಂದು ಸನ್ ಆನ್‌ಲೈನ್  ವೆಬ್ ಸೈಟ್ ಸುದ್ದಿ ವರದಿ ಮಾಡಿದೆ. ಗ್ಯಾಸ್ ಸಿಲಿಂಡರ್ ನಿಂದ ಈ ಸ್ಫೋಟ ಸಂಭವಿಸಿರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

               ಮೃತರು ದ್ವೀಪದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಭೂ ಸುಧಾರಣಾ ಯೋಜನೆಗಾಗಿ ಗುತ್ತಿಗೆದಾರರಿಂದ ನೇಮಿಸಲ್ಪಟ್ಟ ಕಾರ್ಮಿಕರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries