ಕೊಚ್ಚಿ: ಶವರ್ಮಾ ಸೇವಿಸಿ ಅಸ್ವಸ್ತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟಿದ್ದಾನೆ. ಕೊಟ್ಟಾಯಂ ಮೂಲದ ರಾಹುಲ್ ಅವರು ಕಾಕ್ಕನಾಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ.
ಶನಿವಾರದಿಂದಲೇ ರಾಹುಲ್ ನನ್ನು ವೆಂಟಿಲೇಟರ್ ಗೆ ದಾಖಲಿಸಲಾಗಿತ್ತು. ಯುವಕನಿಗೆ ಪುಡ್ ಪಾಯ್ಸನ್ ಆಗಿದೆ ಎಂದು ಮನೆಯವರು ದೂರು ನೀಡಿದ್ದರು. ನಂತರ ರಾಹುಲ್ ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷಾ ಫಲಿತಾಂಶ ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.
ಕೆಲ ದಿನಗಳ ಹಿಂದೆ ಕಾಕ್ಕನಾಡು ಹೋಟೆಲ್ ಹಯಾತ್ ನಲ್ಲಿ ರಾಹುಲ್ ಶವರ್ಮಾ ಸೇವಿಸಿದ್ದರು. ಶವರ್ಮಾವನ್ನು ಆನ್‍ಲೈನ್‍ನಲ್ಲಿ ಆರ್ಡರ್ ಮಾಡುವ ಮೂಲಕ ಖರೀದಿಸಲಾಗಿತ್ತು. ಮರುದಿನದಿಂದ ಅವರು ಅಸ್ವಸ್ಥಗೊಂಡರು ಮತ್ತು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ರಾಹುಲ್ ಕಾಕ್ಕನಾಡು ಸೆಸ್ ಉದ್ಯೋಗಿ. ಕುಟುಂಬದವರ ದೂರಿನ ಮೇರೆಗೆ ತ್ರಿಕಕ್ಕರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪುಡ್ ಪಾಯ್ಸನಿಂಗ್ ಆರೋಪದ ಹಿನ್ನೆಲೆಯಲ್ಲಿ ರಾಹುಲ್ ಶವರ್ಮಾ ಖರೀದಿಸಿದ ಹೋಟೆಲ್ ಅನ್ನು ಮುನ್ಸಿಪಲ್ ಕಾಪೆರ್Çರೇಷನ್ ಮುಚ್ಚಿದೆ. ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಕೂಡ ಇಲ್ಲಿ ಪರಿಶೀಲನೆ ನಡೆಸಿದರು.