ಬದಿಯಡ್ಕ: ಕುಂಬ್ದಾಜೆ ಪಂಚಾಯಿತಿ ವತಿಯಿಂದ ಗಾಂ ಜಯಂತಿ ದಿನಾಚರಣೆ ಪ್ರಯಕ್ತ ಸ್ವಚ್ಛತಾ ಕಾರ್ಯಕ್ರಮ ಜರಗಿತು. ಸ್ವಚ್ಛತೆಯ ಪ್ರಮಾಣ ವಚನ ಬೋಧಿಸಲಾಯಿತು. ವಾರ್ಡ್ ಸದಸ್ಯ ಹರೀಶ ಗೊಸಾಡ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತು ಆಡಳಿತ ಸಮಿತಿಯ ಅಧ್ಯಕ್ಷ ಹಮೀದ್ ಪೆÇೀಸೋಲಿಗೆ ಕಾರ್ಯಕ್ರಮ ಉದ್ಘಾಟಿಸಿ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸದ ಜೊತೆಗೆ ಸ್ವಚ್ಛತೆಯ ಪ್ರಾಧಾನ್ಯ ಹಾಗೂ ಮಲಿನೀಕರಣದಿಂದ ನಮ್ಮ ಪರಿಸರದ ಮೇಲೆ ಆಗಿರುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಶುಚಿತ್ವ ಕಾರ್ಯಕರ್ತೆ ಸುಗಂಧಿ, ಹಸಿರು ಕ್ರಿಯಾಸೇನೆ ಪ್ರತಿನಿಧಿಗಳು, ಗಫೂರ್, ವ್ಯಾಪಾರಿ ವ್ಯವಸಾಯ ಸಮಿತಿಯ ಅಧ್ಯಕ್ಷ ಶ್ರೀಧರ ಪದ್ಮಾರು, ಆಟೋ ಚಾಲಕರು, ಕುಟುಂಬ ಶ್ರೀ ಕಾರ್ಯಕರ್ತೆಯರು, ಶ್ರೀ ಅನ್ನಪೂರ್ಣೇಶ್ವರಿ ಶಾಲೆಯ ಸ್ಕೌಟ್-ಗೈಡ್ಸ್, ಶಾಲೆಯ ಅಧ್ಯಾಪಕರು ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ಹರೀಶ್ ಸ್ವಾಗತಿಸಿ, ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ ಜಿಜು ಮಾರ್ಕೊಸ್ ವಂದಿಸಿದರು.