ನವದೆಹಲಿ: ಹಿರಿಯ ನಾಯಕ ಅಜಯ್ ಮಾಕೆನ್ ಅವರನ್ನು ಪಕ್ಷದ ಖಜಾಂಚಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ.
ನವದೆಹಲಿ: ಹಿರಿಯ ನಾಯಕ ಅಜಯ್ ಮಾಕೆನ್ ಅವರನ್ನು ಪಕ್ಷದ ಖಜಾಂಚಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂದಿನ ತಿಂಗಳುಗಳಲ್ಲಿ ಸಂಪನ್ಮೂಲದ ಕ್ರೋಡೀಕರಣಕ್ಕೆ ಪಕ್ಷವು ಹೆಚ್ಚಿನ ಒತ್ತು ನೀಡಬೇಕಾದ ಸಂದರ್ಭದಲ್ಲಿಯೇ ಈ ನೇಮಕಾತಿಯು ನಡೆದಿದೆ.
ಹಿರಿಯ ನಾಯಕ ಪವನ್ ಕುಮಾರ ಬನ್ಸಲ್ ಇದುವರೆಗೂ ಈ ಹುದ್ದೆಯಲ್ಲಿದ್ದರು. ಅಹ್ಮದ್ ಪಟೇಲ್ ಅವರ ನಿಧನಾನಂತರ ಬನ್ಸಲ್ ಅವರನ್ನು ಹಂಗಾಮಿಯಾಗಿ ಖಜಾಂಚಿ ಸ್ಥಾನಕ್ಕೆ 2020ರಲ್ಲಿ ನೇಮಿಸಲಾಗಿತ್ತು.
ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಆಪ್ತರೆಂದು ಗುರುತಿಸಲಾಗುವ 59 ವರ್ಷದ ಮಾಕೆನ್ ಅವರನ್ನು ಖರ್ಗೆ ಅವರು ಇದೇ ವರ್ಷದ ಆಗಸ್ಟ್‌ನಲ್ಲಿ ಎಐಸಿಸಿ ಕಾರ್ಯಕಾರಿ ಸಮಿತಿಗೆ ನಾಮಕರಣ ಮಾಡಿದ್ದರು. ಆಗಿನಿಂದಲೂ ಇವರು ಖಜಾಂಚಿಯಾಗಿ ನೇಮಕವಾಗಬಹುದು ಎಂಬ ಊಹಾಪೋಹವಿತ್ತು.