ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲಾ ಮಟ್ಟದ ಕಲೋತ್ಸವವನ್ನು ಬದಿಯಡ್ಕ ಗ್ರಾಮ ಪಂಚಾಯಿತಿ ಸದಸ್ಯ ಶಾಮ ಪ್ರಸಾದ್ ಮಾನ್ಯ ಉದ್ಘಾಟಿಸಿದರು. ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಸಲೀಂ ಏಡನೀರು ಅಧ್ಯಕ್ಷತೆ ವಹಿಸಿದ್ದರು.
ಸ್ಟಾಫ್ ಕಾರ್ಯದರ್ಶಿಗಳಾದ ಪ್ರಭಾಕರ ನಾಯರ್, ಪ್ರಭಾವತಿ ಕೆದಿಲಾಯ, ಹಿರಿಯ ಅಧ್ಯಾಪಕಿ ಶಾಹಿದ ಬಿ.ವಿ, ಕೇಶವ ಮಾಸ್ಟರ್, ಸರ್ವಮಂಗಲ ಟೀಚರ್ ಕಲೋತ್ಸವದ ಸಂಚಾಲಕಿ ಶ್ರೀಜಾ ಟೀಚರ್ ಸಮಾರಂಭದಲ್ಲಿ ಉಪಸ್ಥೀತರಿದ್ದರು. ಮುಖ್ಯೋಪಾಧ್ಯಾಯನಿ ಮಿನಿ .ಪಿ ಸ್ವಾಗತಿಸಿದರು. ಪ್ರಾಂಶುಪಾಲ ಮಾಧವನ್ ಭಟ್ಟಾತಿರಿ ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು, ಜತೆ ಸಂಚಾಲಕ ನಿರಂಜನ ರೈ ಪೆರಡಾಲ ಕಾರ್ಯಕ್ರಮ ನಿರೂಪಿಸಿದರು.