ಕುಂಬಳೆ : ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತ, ಬಿಜೆಪಿ ಕುಂಬಳೆ ಮಂಡಲ ಸಮಿತಿ ಸದಸ್ಯ,ಆರ್ ಟಿ ಐ ಕಾರ್ಯಕರ್ತ ಬಿ.ಸುಬ್ರಹ್ಮಣ್ಯ ನಾಯಕ ಅವರಿಗೆ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಶ್ರದ್ದಾಂಜಲಿ ಕಾರ್ಯಕ್ರಮ ಬುಧವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬಳೆ ಬಿಜೆಪಿ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ವಹಿಸಿದ್ದರು. ಶ್ರದ್ದಾಂಜಲಿ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ನಾಯ್ಕಾಪು ಉದ್ಘಾಟಿಸಿ ಸುಬ್ರಹ್ಮಣ್ಯ ನಾಯಕ ಬಗ್ಗೆ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಂಡಲ ಉಪಾಧ್ಯಕ್ಷ ಕೆ. ರಮೇಶ ಭಟ್, ಹಿರಿಯರಾದ ಗೋಪಾಲ ಪೂಜಾರಿ, ಕಾರ್ಯಾಲಯ ಕಾರ್ಯದರ್ಶಿ ಶಶಿ ಕುಂಬಳೆ ಉಪಸ್ಥಿತರಿದ್ದರು. ಕುಂಬಳೆ ಮಂಡಲ ಉಪಾಧ್ಯಕ್ಷ ಕೆ. ಸುಧಾಕರ ಕಾಮತ್ ಸ್ವಾಗತಿಸಿ, ಪಂಚಾಯತಿ ಸದಸ್ಯರಾದ ವಿವೇಕಾನಂದ ಶೆಟ್ಟಿ ವಂದಿಸಿದರು.