ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹೆಣ್ಣುಮಕ್ಕಳಿಗಿರುವ ತೈಕೊಂಡೋ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಶಾಲೆಯಲ್ಲಿ ಜರುಗಿತು. ಶಾಲಾ ಪ್ರಾಂಶುಪಾಲ ಸೆಲ್ವದಾಸ್ ಸಮಾರಂಭ ಉದ್ಘಾಟಿಸಿದರು.ಶಾಲೆಯ ರಕ್ಷಕಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ಮರಿಯಂಗೋಡ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿಯರಲ್ಲಿ ಆತ್ಮರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಅವರನ್ನು ತರಬೇತುದಾರರನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಾಲಾ ಮುಖ್ಯ ಶಿಕ್ಷಕಿ ವಾರಿಜಾ ನೇರೋಳು, ಕುಂಬಳೆ ಬಿ.ಆರ್.ಸಿ ಯ ಕೋರ್ಡಿನೇಟರ್ ಈಶ್ವರ ಮಾಸ್ಟರ್ ತೈಕೊಂಡೋ ತರಬೇತುದಾರರಾದ ಸಾಕ್ಷಿ, ಅಭಿಷೇಕ್ ಹಾಗೂ ಅಧ್ಯಾಪಿಕೆ ಅನ್ನಪೂರ್ಣ ಟೀಚರ್ ಉಪಸ್ಥಿತರಿದ್ದರು. ಸ್ಟಾಫ್ ಸೆಕ್ರಟರಿ ದಾಸಪ್ಪ ಮಾಸ್ಟರ್ ಸ್ವಾಗತಿಸಿದರು. ಸೀನಿಯರ್ ಅಸಿಸ್ಟೆಂಟ್ ದಿವ್ಯಗಂಗಾ ವಂದಿಸಿದರು.