ಪತ್ತನಂತಿಟ್ಟ: ತುಲಾಮಾಸ ಪೂಜೆಗಾಗಿ ಶಬರಿಮಲೆ ದೇವಾಲಯದ ಗರ್ಭಗೃಹದ ಬಾಗಿಲು ನಾಳೆ ತೆರೆಯಲಿದೆ. ಸಂಜೆ 5 ಗಂಟೆಗೆ ತಂತ್ರಿ ಕಂಠಾರರ್ ಮಹೇಶ್ ಮೋಹನ್ ಅವರ ಉಪಸ್ಥಿತಿಯಲ್ಲಿ ಕೆ ಜಯರಾಮನ್ ನಂಬೂದಿರಿ ಬಾಗಿಲು ತೆರೆಯುವರು.
ನಾಳೆ ಯಾವುದೇ ವಿಶೇಷ ಪೂಜೆ ಇರುವುದಿಲ್ಲ. ಬುಧವಾರದಿಂದ ಉದಯಾಸ್ತಮಾನ ಪೂಜೆ, ಪಡಿಪೂಜೆ, ಕಲಭಾಭಿಷೇಕ ಹಾಗೂ ಪುಷ್ಪಾಭಿಷೇಕ ನಡೆಯಲಿದೆ.
18ರಂದು ಬೆಳಗ್ಗೆ 8ಕ್ಕೆ ಉಷಃಪೂಜೆ ಬಳಿಕ ಶಬರಿಮಲೆ ಮತ್ತು ಮಾಳಿಗಪ್ಪುರಂ ಸನ್ನಿಧಿಗಳಿಗೆ ನೂತನ ಮೇಲ್ಶಾಂತಿಗಳ ಆಯ್ಕೆಗೆ ಡ್ರಾ ನಡೆಯಲಿದೆ. ಡ್ರಾದಲ್ಲಿ ಶಬರಿಮಲೆಗೆ 17 ಮತ್ತು ಮಾಳಿಗಪ್ಪುರಂ ಕ್ಷೇತ್ರಕ್ಕ 12 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪಂದಳಂ ಅರಮನೆಯ ವೈದೇಹ ಮತ್ತು ನಿರುಪಮಾಜಿ ವರ್ಮಾ ಅವರು ಚೀಟಿ ಎತ್ತಲಿದ್ದಾರೆ.