ಕಾಸರಗೋಡು: ನವಕೇರಳ ಸಂಗಮ, ಜನಸಾಮಾನ್ಯರ ಸಮಸ್ಯೆಗಳನ್ನು ಅರಿತು ಪರಿಹರಿಸುವ ವೇದಿಕೆಯಾಗಲಿದೆ ಎಂದು ಬಂದರು, ವಸ್ತು ಸಂಗ್ರಹಾಲಯ ಮತ್ತು ಪ್ರಾಚ್ಯವಸ್ತು ಖಾತೆ ಇಲಾಖೆ ಸಚಿವ ಅಹ್ಮದ್ ದೇವಲ್ ಕೋವಿಲ್ ತಿಳಿಸಿದ್ದಾರೆ.
ಅವರು ನವ ಕೇರಳ ಸಂಗಮದ ವಿಧಾನಸಭೆಯ ಕಾಞಂಗಾಡು ವಿಧಾನಸಭಾ ಕ್ಷೇತ್ರದ ಸಂಘಟನಾ ಸಮಿತಿ ರಚನಾ ಸಭೆ ಉದ್ಘಾಟಿsಸಿ ಮಾತನಾಡಿದರು.
ನವಕೇರಳದ ಸಾಧನೆಗಳು ಕೇರಳದ ಸಮಸ್ತ ಜನತೆಯ ಸಮಾವೇಶವಾಗಲಿದೆ. ಸಚಿವರುಗಳು ಕೇರಳದ ಎಲ್ಲಾ ಜಿಲ್ಲೆಗಳಿಗೆ ನೇರವಾಗಿ ತಲುಪಿ ಜನರ ಅನೇಕ ಸಮಸ್ಯೆಗಳನ್ನು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವ ರೀತಿಯಿಲ್ಲಿ ಇಂತಹ ಸಂಗಮ ಆಯೋಜಿಸಲಾಗುತ್ತಿದ್ದು, ಮುಖ್ಯಮಂತ್ರಿ ಹಾಗೂ ಸಚಿವರನ್ನು ಭೇಟಿ ಮಾಡಿ ಸಮಸ್ಯೆಗೆ ಖುದ್ದಾಗಿ ಪರಿಹಾರ ಕಂಡುಕೊಳ್ಳಲು ನವಕೇರಳ ಸಂಗಮ ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು.
ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎಂ. ಲಕ್ಷ್ಮಿ, ಅಜನೂರು ಪಂಚಾಯಿತಿ ಅಧ್ಯಕ್ಷ ಟಿ. ಶೋಭಾ, ಕೋಡೊಂ ಬೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಶ್ರೀಜಾ ಮನೋಜ್, ಕಾಞಂಗಾಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಪ್ರೀತಾ, ಕಿನಾನೂರು ಕರಿಂದಲಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಕೆ.ರವಿ ಕಾಞಂಗಾಡ್ ಪುರಸಭೆ ಉಪಾಧ್ಯಕ್ಷ ಬಿಲ್‍ಟೆಕ್ ಅಬ್ದುಲ್ಲಾ ಕಾಸರಗೋಡು ಜಿಎಸ್‍ಟಿ ಜಂಟಿ ಆಯುಕ್ತ ಪಿ.ಸಿ.ಜಯರಾಜ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸ್ವಾಗತಿಸಿದರು. ಎಡಿಎಂ ಕೆ. ನವೀನ್ ಬಾಬು ವಂದಿಸಿದರು.