ಕಾಸರಗೋಡು: ಪೈವಳಿಕೆ ಬಾಯಿಕಟ್ಟೆ ಬಾಳಿಕೆ ನಿವಾಸಿ ಅಜೀಜ್ ಕೊಲೆ ಪ್ರಕರಣದ 16ಮಂದಿ ಆರೋಪಿಗಳಲ್ಲಿ 11ಮಂದಿಯ ಮೇಲಿನ ಆರೋಪ ಸಾಬೀತುಪಡಿಸಲಾಗದ ಹಿನ್ನೆಲೆಯಲ್ಲಿ ಕಾಸರಗೋಡು ಹೆಚ್ಚುವರಿ ಜಿಲ್ಲಾಸೆಶನ್ಸ್ ನ್ಯಾಯಾಲಯ(ದ್ವಿತೀಯ) ಇವರನ್ನು ಖುಲಾಸೆಗೊಳಿಸಿದೆ. ಪ್ರಕರಣದ ಇತರ ಐವರು ಆರೋಪಿಗಳು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ, ಅವರ ಮೇಲಿನ ಪ್ರಕರಣದ ವಿಚಾರಣೆಯನ್ನು ಪ್ರತ್ಯೇಕಗೊಳಿಸಿ ಮುಂದೂಡಲಾಗಿದೆ.
2014 ಜನವರಿ 25ರಂದು ರಾತ್ರಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬಾಳಕೆ ಅಜೀಜ್‍ನನ್ನು ಪೈವಳಿಕೆ ಚೇವಾರು ರಸ್ತೆ ಜಂಕ್ಷನ್‍ನಲ್ಲಿ ಇನ್ನೊಂದು ಕಾರಿನಲ್ಲಿ ಆಗಮಿಸಿದ ತಂಡ ಕಾರು ತಡೆದು ಬಾಳಿಕೆ ಅಜೀಜ್‍ನನ್ನು ಮಾರಕಾಯುಧಗಳಿಂದ ಕಡಿದು ಕೊಲೆಗೈದಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.