ಕಾಸರಗೋಡು: 28ನೇ ರಾಜ್ಯ ಸೀನಿಯರ್ ಸಾಫ್ಟ್ ಬಾಲ್ ಚಾಂಪಿಯನ್ ಶಿಪ್ ಅಕ್ಟೋಬರ್ 12 ರಿಂದ 15 ರವರೆಗೆ ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೇರಳದ 14 ಜಿಲ್ಲೆಗಳ ಪುರುಷ ಮತ್ತು ಮಹಿಳಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿರುವುದಾಗಿ ರಾಜ್ಯ ಸಾಫ್ಟ್ ಬಾಲ್ ಸಂಸ್ಥೆ ಉಪಾಧ್ಯಕ್ಷ ಸಿ.ಎಲ್.ಹಮೀದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 12 ರಂದು ಸಂಜೆ 4ಕ್ಕೆ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ನಗರಸಭಾಧ್ಯಕ್ಷ, ವಕೀಲ ವಿ.ಎಂ.ಮುನೀರ್ ಅಧ್ಯಕ್ಷತೆ ವಹಿಸುವರು. ಕೇರಳ ರಾಜ್ಯ ಸಾಫ್ಟ್ ಬಾಲ್‍ಸಂಘದ ಅಧ್ಯಕ್ಷ ಸ್ಪರ್ಜನ್ ಕುಮಾರ್ ಐಪಿಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯದರ್ಶಿ ಅನಿಲ್ ಎ.ಜಾನ್ಸನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಜ್ ಪಾದೂರು, ಡಾ. ಎಂ.ಪಿ ಶಾಫಿ ಹಾಜಿ, ಚೆಂಗಳ ಪಂಚಾಯತ್ ಸದಸ್ಯೆ ಪಿ.ಖದೀಜಾ,ನಗರಸಭಾ ಸದಸ್ಯೆ ಸವಿತಾ ಟೀಚರ್, ಜಗದೀಶ್ ಕುಂಬಳೆ, ಇ.ಚಂದ್ರಶೇಖರ, ನಂದಿಕೇಶನ್ ಎನ್, ಓ.ಟಿ.ಗಫೂರ್ ಹಾಗೂ ಕೇರಳ ರಾಜ್ಯ ಸಾಫ್ಟ್ ಬಾಲ್ ಸಂಸ್ಥೆಯ ಕೋಶಾಧಿಕಾರಿ ರಮೇಶ ಪಾಲ್ಗೊಳ್ಳುವರು.
15 ರಂದು ಬೆಳಿಗ್ಗೆ 11ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ರಾಜ್ಯ ಉಪಾಧ್ಯಕ್ಷ ಸಿ.ಎಲ್. ಹಮೀದ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ಬಹುಮಾನ ವಿತರಿಸುವರು.
ಸುದ್ದಿಗೋಷ್ಠೀಯಲ್ಲಿ ಜಿಲ್ಲಾ ಸಾಫ್ಟ್ ಬಾಲ್ ಸಂಸ್ಥೆಯ ಅಧ್ಯಕ್ಷ ಕೆ.ಎಂ.ಬಲ್ಲಾಳ್, ಕಾರ್ಯದರ್ಶಿ ಅಶೋಕನ್ ಧರ್ಮತ್ತಡ್ಕ, ಕೋಶಾಧಿಕಾರಿ ಶಾಫಿ ಎ.ನೆಲ್ಲಿಕುನ್ನು, ರಿಜಿತ್ ಕುಮಾರ್ ಪಾಲ್ಗೊಂಡಿದ್ದರು.