ಕಾಕ್ಟೇಲ್‌ಗಳಿಗೆ ಇತ್ತೀಚೆಗೆ ತುಂಬಾನೇ ಡಿಮ್ಯಾಂಡ್ ಹೆಚ್ಚಾಗುತ್ತಿದೆ, ಪಾರ್ಟಿ-ಫಂಕ್ಷನ್‌ಗಳಲ್ಲಿ ಕಾಕ್ಟೇಲ್‌ಗಳ ಟ್ರೆಂಡ್ ಹೆಚ್ಚಾಗಿದೆ. ಅದರಲ್ಲೂ ಅದಕ್ಕೆ ತರಕಾರಿಗಳನ್ನು ಹಾಕಿ ಕುಡಿಯುವ ಟ್ರೆಂಡ್ ಹೆಚ್ಚಾಗುತ್ತಿದೆ. ಕಾಕ್ಟೇಲ್ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗುವುದೇ? ಇದು ಶರೀರದ ಮೇಲೆ ಬೀರುವ ಪ್ರಭಾವವೇನು ಎಂದು ನೋಡೋಣ ಬನ್ನಿ:
ಕಾಕ್ಟೇಲ್ ಆರೋಗ್ಯಕರವೇ?
ಎಲ್ಲಾ ಮದ್ಯದಂತೆ ಇದನ್ನು ಮಿತಿಯಲ್ಲಿ ಕುಡಿದರೆ ತೊಂದರೆಯಿಲ್ಲ, ಇಲ್ಲದಿದ್ದರೆ ಇದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಲ್ಲದೆ ಇದರಲ್ಲಿ ಸಕ್ಕರೆಯಂಶ ಕೂಡ ಅಧಿಕವಿರುತ್ತದೆ. ಕಾಕ್ಟೇಲ್ ಅಧಿಕ ಕುಡಿಯುವುದರಿಂದ ಹೃದಯದ ಸಮಸ್ಯೆ, ಕ್ಯಾನ್ಸರ್ ಅಪಾಯ, ನಿದ್ರಾಹೀನತೆ ಈ ಬಗೆಯ ಸಮಸ್ಯೆಗಳು ಕಂಡು ಬರುವುದು.
ಯಾವ ಬಗೆಯ ಕಾಕ್ಟೇಲ್ ದೂರವಿಡುವುದು ಒಳ್ಳೆಯದು?
ಅತ್ಯಧಿಕ ಸಕ್ಕರೆಯಂಶವಿರುವ ಕಾಕ್ಟೇಲ್ ಆರೋಗ್ಯಕರವಲ್ಲ, ಇದರಲ್ಲಿ ಪೋಷಕಾಂಶಗಳು ಕಡಿಮೆ ಇರಲಿದೆ.
ಕಾಕ್ಟೇಲ್ ಪ್ರತಿನಿತ್ಯ ಕುಡಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ'
ಯಾರು ಕಾಕ್ಟೇಲ್ ಪ್ರತಿನಿತ್ಯ ಸೇವಿಸುತ್ತಾರೋ ಅವರಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಹೇಳಿದೆ.
ನಿದ್ರಾಹೀನತೆ ಸಮಸ್ಯೆ ಉಂಟಾಗುವುದು
ಕಾಕ್ಟೇಲ್ ಕುಡಿಯುವುದರಿಂದ ನಿದ್ರಾಹೀನತೆ ಸಮಸ್ಯೆ ಕಂಡು ಬರುವುದು. ಇದರಿಂದ ಗುಣಮಟ್ಟದ ನಿದ್ದೆಗೆ ತೊಂದರೆಯಾಗುವುದು. ನಿದ್ದೆ ಕಡಿಮೆಯಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಅನೇಕ ಸಮಸ್ಯೆಗಳು ಉಂಟಾಗುವುದು.
ಮೈ ತೂಕ ಹೆಚ್ಚಾಗುವುದು
ಕಾಕ್ಟೇಲ್‌ನಲ್ಲಿ ಸಕ್ಕರೆಯಂಶ ಅಧಿಕವಿರುವುದರಿಂದ ಮೈ ತೂಕ ಹೆಚ್ಚಾಗುವುದು. ಮಧುಮೇಹಿಗಳಿಗೆ ಒಳ್ಳೆಯದಲ್ಲ. ಕೊಲೆಸ್ಟ್ರಾಲ್ ಪ್ರಮಾಣ ಕೂಡ ಹೆಚ್ಚಿಸುತ್ತದೆ.
ಕ್ಯಾನ್ಸರ್ ಉಂಟು ಮಾಡುತ್ತದೆ
ಕಾಕ್ಟೇಲ್ ಕುಡಿಯುವುದರಿಂದ ಕ್ಯಾನ್ಸರ್ ಅಪಾಯ ಅಧಿಕ. ಕರುಳಿನ ಕ್ಯಾನ್ಸರ್, ಸ್ತನಕ್ಯಾನ್ಸರ್ ಹೀಗೆ 7 ಬಗೆಯ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಆದ್ದರಿಂದ ಕಾಕ್ಟೇಲ್ ಕ್ಯಾನ್ಸರ್‌ಕಾರಕ ಎಂದು ಹೇಳಬಹುದು.
ಯಾರು ಕಾಕ್ಟೇಲ್ ಕುಡಿಯಲೇಬಾರದು?
* ಗರ್ಭಿಣಿಯರು
* ಎದೆಹಾಲುಣಿಸುವವರು
* ಯಾವುದಾದರೂ ಔಷಧಿ ತೆಗೆದುಕೊಳ್ಳುತ್ತಿದ್ದರೆ ಕಾಕ್ಟೇಲ್ ತೆಗೆದುಕೊಂಡರೆ ಅಡ್ಡಪರಿಣಾಮ ಉಂಟಾಗುವುದು
* ಮದ್ಯವ್ಯಸನಿಗಳು
ಕಾಕ್ಟೇಲ್ ತೆಗೆದುಕೊಳ್ಳುವುದು ಮಧುಮೇಹದ ಅಪಾಯ ಹೆಚ್ಚಾಗುವುದು ಅಲ್ಲದೆ ಗಾಲ್‌ಸ್ಟೋನ್ ಕಂಡು ಬರಬಹುದು.
ಕಾಕ್ಟೇಲ್‌ನಲ್ಲಿ ಆರೋಗ್ಯಕರ ಕಾಕ್ಟೇಲ್ ಎಂದೇನಿಲ್ಲ, ಎಲ್ಲವೂ ಶರೀರದ ಮೇಲೆ ಕೆಟ್ಟ ಪರಿಣಾಮ ಬೀರುವುದು.
ಕಾಕ್ಟೇಲ್ ಹಾಗೂ ಮಿಕ್ಸ್ಡ್ ಡ್ರಿಂಕ್ ಎರಡೂ ಒಂದೇ? ನೀವು ಎರಡು ಮದ್ಯವನ್ನು ಮಿಕ್ಸ್ ಮಾಡಿದರೆ ಅದು ಮಿಕ್ಸ್ಡ್ ಡ್ರಿಂಕ್ ಆಗುತ್ತದೆ, ಅದಕ್ಕಿಂತ ಅಧಿಕ ಮಿಕ್ಸ್ ಮಾಡಿದರೆ ಅದು ಕಾಕ್ಟೇಲ್ ಆಗುತ್ತೆ.