ಕೋಯಿಕ್ಕೋಡ್: ಪೆರಿಂಗೊಲಂನಲ್ಲಿರುವ ಮಿಲ್ಮಾ ಡೈರಿಯಲ್ಲಿ ಬೆಂಕಿ ಅಗ್ನಿ ಅವಘಡ ನಡೆದಿದೆ. ಕೋಝಿಕ್ಕೋಡ್ ಪೆರಿಂಗೊಲಂ ವರತ್ಯಕಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ ಏಳು ಗಂಟೆಗೆ ಈ ಘಟನೆ ನಡೆದಿದೆ.
ಕಚೇರಿಯಲ್ಲಿದ್ದ ಫ್ರಿಡ್ಜ್ ಸುಟ್ಟು ಕರಕಲಾಗಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದರು. ನಂತರ ಕಚೇರಿ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.