ಬದಿಯಡ್ಕ: ಇಂಡಿಯನ್ ನೇಶನಲ್ ಕಾಂಗ್ರೆಸ್ ಬದಿಯಡ್ಕ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಯುವ ನಾಯಕ ಶ್ಯಾಮಪ್ರಸಾದ್ ಮಾನ್ಯ ಅವರ ಪದಗ್ರಹಣ ಕಾರ್ಯಕ್ರಮ ಮಂಗಳವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರಗಿತು.
ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅವರು ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಯುವ ನಾಯಕ ಶ್ಯಾಮಪ್ರಸಾದ್ ಮಾನ್ಯ ಬದಿಯಡ್ಕ ಗ್ರಾಮಪಂಚಾಯಿತಿಯಲ್ಲಿ ಬಿಜೆಪಿಯ ಭದ್ರಕೋಟೆಯಾದ ಪಟ್ಟಾಜೆ ವಾರ್ಡಿನಲ್ಲಿ ವಿಜಯಿಯಾದ ಜನನಾಯಕನಾಗಿದ್ದಾರೆ. ವಿಜಯದಶಮಿಯ ಶುಭಸಂದಭರ್Àದಲ್ಲಿ ಅಧಿಕಾರವನ್ನು ಪಡೆದಿದ್ದು, ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಸಾಮಥ್ರ್ಯ ಅವರಲ್ಲಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮೆಲ್ಲಾ ಕಾರ್ಯಕರ್ತರು ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತೆ ಗೆಲ್ಲಿಸಲು ಕಠಿಣ ಪರಿಶ್ರಮ ಪಡಬೇಕು. 9 ವರ್ಷಗಳಿಂದ ದೇಶವನ್ನಾಳುತ್ತಿರುವ ನರೇಂದ್ರಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕಾಗಿ ಏನನ್ನೂ ಮಾಡಲು ಸಿದ್ಧವಿದೆ. ಭಾರತ್ ಜೋಡೋ ಯಾತ್ರೆಯ ಮೂಲಕ ನಮ್ಮ ನೆಚ್ಚಿನ ನಾಯಕ ರಾಹುಲ್ ಗಾಂಧಿಯವರು ದೇಶದಾದ್ಯಂತ ಪಕ್ಷಕ್ಕೆ ಅನುಕೂಲಕರ ವಾತಾರವರಣವನ್ನು ನಿರ್ಮಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯನ್ನು ಬಗ್ಗುಬಡಿದು ಅಧಿಕಾರಕ್ಕೇರಿದ ಪಕ್ಷವು ಕೇಂದ್ರದಲ್ಲೂ ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಹಾಲಿ ಮಂಡಲಾಧ್ಯಕ್ಷ ಎಂ. ನಾರಾಯಣ ನೀರ್ಚಾಲು ಅಧ್ಯಕ್ಷತೆ ವಹಿಸಿದ್ದರು. ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್, ಕಾರಡ್ಕ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷ ಕೆ.ಗೋಪಕುಮಾರ್, ಮುಖಂಡರುಗಳಾದ ಎಂ.ಕೆ.ಪ್ರಭಾಕರನ್, ಐತ್ತಪ್ಪ ಚೆನ್ನೆಗುಳಿ, ವಕೀಲ ಎಂ. ಮಹಾಬಲ ಭಟ್ ಮಿಂಚಿನಡ್ಕ, ಪಿ.ಜಿ.ಚಂದ್ರಹಾಸ ರೈ, ಆನಂದ ಮವ್ವಾರು, ಜಗನ್ನಾಥ ರೈ ಪೆರಡಾಲ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.