ತಿರುವನಂತಪುರಂ: ರಾಜ್ಯದ ಎಂಟು ರೈಲುಗಳಿಗೆ ಹೆಚ್ಚುವರಿ ಬೋಗಿಗಳಿಗೆ ರೈಲ್ವೆ ಅನುಮತಿ ನೀಡಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಈ ಕ್ರಮಕ್ಕೆ ಮುಂದಾಗಲಾಗಿದೆ.
ತಿರುವನಂತಪುರಂ - ಎರ್ನಾಕುಳಂ ವಂಚಿನಾಡ್ ಎಕ್ಸ್‍ಪ್ರೆಸ್, ಎರ್ನಾಕುಳಂ - ಕಣ್ಣೂರು ಇಂಟರ್‍ಸಿಟಿ ಎಕ್ಸ್‍ಪ್ರೆಸ್, ಕಣ್ಣೂರು - ಆಲಪ್ಪುಳ ಎಕ್ಸಿಕ್ಯೂಟಿವ್ ಎಕ್ಸ್‍ಪ್ರೆಸ್, ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‍ಪ್ರೆಸ್, ಕಣ್ಣೂರು - ಎರ್ನಾಕುಳಂ ಇಂಟರ್‍ಸಿಟಿ ಎಕ್ಸ್‍ಪ್ರೆಸ್, ಎರ್ನಾಕುಳಂ - ತಿರುವನಂತಪುರಂ ವಂಚಿನಾಡ್ ಎಕ್ಸ್‍ಪ್ರೆಸ್, ತಿರುವನಂತಪುರಂ - ಶೋರ್ನೂರ್ ವೇನಾಡ್ ಎಕ್ಸ್‍ಪ್ರೆಸ್, ಶೋರ್ನೂರ್ – ತಿರುವನಂತಪುರಂ ವೇನಾಡ್ ಎಕ್ಸ್‍ಪ್ರೆಸ್ ಎಂಬೀ ರೈಲುಗಳಿಗೆ ಹೆಚ್ಚುವರಿ ಬೋಗಿ ಅನುಮತಿಸಲಾಗಿದೆ.
ಪ್ರಸ್ತುತ ಎಲ್ಲಾ ರೈಲುಗಳಿಗೆ ಎರಡನೇ ದರ್ಜೆಯ ಪ್ಯಾಸೆಂಜರ್ ಬೋಗಿಗಳನ್ನು ಸೇರಿಸಲಾಗಿದೆ. ಪ್ರತಿ ರೈಲಿನಲ್ಲಿ ಕೇವಲ ಒಂದು ಕೋಚ್ ಅನ್ನು ಮಾತ್ರ ಅನುಮತಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಕಾರಣ ಈಗಿನ ಪ್ರಯಾಣದ ತೊಂದರೆಗೆ ಇದು ಬಹುಮಟ್ಟಿಗೆ ಪರಿಹಾರವಾಗಲಿದೆ.