ಪೆರ್ಲ : ಹೊಂಬೆಳಕು ಟ್ಯೂಷನ್ ಸೆಂಟರ್ ಪೆರ್ಲ, ವಿದ್ಯಾರ್ಥಿಗಳ ಸಬಲೀಕರಣ ಕಾರ್ಯಕ್ರಮದ ಅಂಗವಾಗಿ ಪರೀಕ್ಷೆಗೆ ತಯಾರಿ ಮತ್ತು ಎದುರಿಸುವ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮವನ್ನು ಕೇಂದ್ರದ ಸಂಚಾಲಕ ಬಾಲಕೃಷ್ಣ ಕುಲಾಲ್ ಉದ್ಘಾಟಿಸಿದರು. ಪ್ರಾಂಶುಪಾಲ ಡಾ ಕೆ ಕೆ ರೈ ಪರೀಕ್ಷೆಯ ಮಹತ್ವದ ಕುರಿತು ಮಾತನಾಡಿದರು. ಇದಾದ ನಂತರ ಪರೀಕ್ಷೆಗೆ ಹೇಗೆ ಪೂರ್ವ ತಯಾರಿ ನಡೆಸಬೇಕು ಮತ್ತುಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ದೀರ್ಘ ಅವಧಿಯ ತರಬೇತಿಯನ್ನುನೀಡಲಾಯಿತು. ಈ ಶಿಬಿರದಲ್ಲಿ
ರಾಜ್ಯ ಮಟ್ಟದ ತರಬೇತುದಾರ ಮತ್ತು ಕೆವಿಎಸ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಎಸ್ ಎನ್ ಭಟ್ ಸೈಪಂಗಲ್ಲುಅವರು ಸಂಪನ್ಮೂಲ ವ್ಯಕ್ತಿಯಾಗಿ ಒತ್ತಡ ಮುಕ್ತ ಪರೀಕ್ಷಾ ವಿಧಾನವನ್ನು ಸಿದ್ಧಪಡಿಸುವ ವಿವಿಧ ಅಂಶಗಳನ್ನು ವಿವರಿಸಿದರು. ಅವರು ಕಲಿಕೆಯ ವಿವಿಧ ತಂತ್ರಗಳನ್ನು ಪ್ರದರ್ಶಿಸಿದರು ಮತ್ತು ಟಿಪ್ಪಣಿ ಮಾಡುವ ರೀತಿ
ಮತ್ತು ಕಲಿಕಾ ಕಾರ್ಡ್‌ಗಳನ್ನು ಸಿದ್ಧಪಡಿಸುವ ಕುರಿತು ವಿಸ್ತಾರ ವಿವರಣೆ ನೀಡಿದರು.. ವಿವಿಧ ವಿಧಾನಗಳನ್ನು ಬಳಸಿಕೊಂಡು ದೀರ್ಘ ಸ್ಮರಣೆಯನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದರ ಕುರಿತು ತರಬೇತಿ ನೀಡಿದರು. ಆಸುಪಾಸಿನ ಶಾಲೆಗಳಿಂದ ಹತ್ತನೆಯ ತರಗತಿಯ ಸುಮಾರು ೫೦ ಮಂದಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು.ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿನಿ ನಿಮಿತ ರೈ ಧನ್ಯವಾದ ಸಮರ್ಪಿಸಿದರು.ಶಾಲಾ ಅಧ್ಯಾಪಕಿ ಸ್ನೇಹ ಬಿ ಪ್ರಾರ್ಥಿಸಿದರು.ಕುಮಾರಿ ಪಲ್ಲವಿ,ಅಧ್ಯಾಪಕಿಕಾರ್ಯಕ್ರಮ ನಿರೂಪಿಸಿದರು.