ಉಪ್ಪಳ: ಪೈವಳಿಕೆ ಕಾಯರ್‍ಕಟ್ಟೆಯ ಸರ್ಕಾರಿ ಉನ್ನತ ಪ್ರೌಢ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಕಾಸರಗೋಡು ಹಸಿರು ಕೇರಳ ಯೋಜನೆಯನ್ವಯ ಆರಂಭಿಸಿರುವ ನೀರಿನ ಪರಿಶುದ್ಧತೆ ಪರೀಕ್ಷಾ ಪ್ರಯೋಗಾಲಯವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್ ಉದ್ಘಾಟಿಸಿದರು.
ಆರೋಗ್ಯ ಸಂರಕ್ಷಣೆಯಲ್ಲಿ ಶುದ್ಧ ಕುಡಿಯುವ ನೀರು ಅತ್ಯಂತ ಮಹತ್ವದ್ದಾಗಿದ್ದು, ಇದನ್ನು ಜನತೆಗೆ ಪೂರೈಸುವಲ್ಲಿ ಸರ್ಕಾರವೂ ಬದ್ಧವಾಗಿರಬೇಕಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಮಿತವಾದ ಬಳಕೆ, ಅಂತರ್ಜಲ ಹೆಚ್ಚಳಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೇ ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಹಮೀದ್ ಕೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಹರೀಶ್ ಕುಮಾರ್ ಬಿ ಪ್ರಾಸ್ತಾವಿಕ ಮಾತುಗಳನ್ನಾಡಿಗಳನ್ನಾಡಿದರು. ವಿಜ್ಞಾನ ಅಧ್ಯಾಪಿಕೆ ರಶ್ಮಿತ ಬಿ ಆರ್ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಾತ್ಯಕ್ಷಿಕೆ ನಡೆಸಿದರು. ಶಾಲಾ ಎಸ್ ಎಂ ಸಿ ಅಧ್ಯಕ್ಷ ಅಜೀಜ್ ಕಳಾಯಿ,ಎಂ ಪಿ ಟಿ ಎ ಅಧ್ಯಕ್ಷೆ ಸುಮಿತ್ರ ಉಪಸ್ಥಿತರಿದ್ದ ಶಿಕ್ಷಕ ಅಶ್ರಫ್ ಜಿ ವಂದಿಸಿದರು.