ಕಾಸರಗೋಡು: ಅಜನೂರು, ಪಳ್ಳಿಕ್ಕರ, ಉದುಮ, ಪುಲ್ಲೂರು-ಪೆರಿಯ ಪಂಚಾಯಿತಿಗಳಿಗೆ ಹಾಗೂ ಬೇಡಡ್ಕ ಗ್ರಾಮ ಪಂಚಾಯಿತಿಯ ಕೊಳತ್ತೂರು ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯನ್ನು ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಾಜ್ಯದಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಜಲಜೀವನ ಮಿಷನನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲು ಸರ್ಕಾರ ಅತ್ಯಂತ ಶ್ರಮಿಸುತ್ತಿದೆ. ಜಲಸಂಪನ್ಮೂಲದಿಂದ ಸಮೃದ್ಧವಾಗಿರುವ ಕೇರಳವು ಭವಿಷ್ಯದಲ್ಲಿ ಕುಡಿಯುವ ನೀರಿನ ಕೊರತೆಯನ್ನು ಎದುರಿಸಲಿರುವುದಾಗಿ ತಜ್ಞರ ವರದಿ ತಿಳಿಸುತ್ತಿದ್ದರೂ, ಇದನ್ನು ಮೀರಿ ನಿಲ್ಲಲು ಶ್ರಮಿಸಬೇಕಾಗಿದೆ. ಅಂತರ್ಜಲದ ಪ್ರಮಾಣ ಕುಸಿಯುತ್ತಿದ್ದು, ಇಂತಹ ಎಲ್ಲ ಬಿಕ್ಕಟ್ಟುಗಳನ್ನು ನಿವಾರಿಸಿ ಎಲ್ಲರಿಗೂ ಕುಡಿಯುವ ನೀರು ತರಲು ಸರ್ಕಾರ ಪ್ರಯತ್ನಿಸುತ್ತಿದೆ. ಎರಡು ವರ್ಷರಾಜ್ಯದ ಗ್ರಾಮೀಣ ಪ್ರದೇಶದ ಎಲ್ಲ ಕುಟುಂಬಗಳಿಗೆ ಕುಡಿಯುವ ನೀರು ತಲುಪಿಸುವ ಯೋಜನೆ ಪ್ರಗತಿಯಲ್ಲಿದೆ. ಕುಡಿಯುವ ನೀರಿನ ವಿಚಾರದಲ್ಲಿ ಕಾಸರಗೋಡು ಜಿಲ್ಲೆಗೆ ವಿಶೇಷ ಪರಿಗಣನೆ ನೀಡಲಾಗುತ್ತಿದ್ದು, ವಿವಿಧ ಯೋಜನೆಗೆ 268 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಕುಮಾರನ್, ಬೇಡಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಮಾಧವನ್, ಕೇರಳ ಜಲ ಪ್ರಾಧಿಕಾರಪಾಲಿಕೆ ಸದಸ್ಯೆ ಉಷಾಲಯಂ ಶಿವರಾಜನ್, ಬೇಡಡ್ಕ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ವಸಂತಕುಮಾರಿ, ಗ್ರಾಮ ಪಂಚಾಯಿತಿ ಸದಸ್ಯ ಎ. ಗೋಪಾಲಕೃಷ್ಣನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ಅನಂತನ್, ಕುಞÂಕೃಷ್ಣನ್ ಮಾಡಕಲ್ಲ್, ಟಿ. ಕೃಷ್ಣನ್, ಜೋಸೆಫ್ ಮೈಕಲ್ ಮತ್ತು ಸಂತೋಷ್ ಮಾವುಂಗಲ್ ಉಪಸ್ಥಿತರಿದ್ದರು. ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಧನ್ಯಾ ಸ್ವಾಗತಿಸಿದರು. ಕೇರಳ ಜಲ ಪ್ರಾಧಿಕಾರ ಉತ್ತರ ವಲಯದ ಮುಖ್ಯ ಎಂಜಿನಿಯರ್ ಟಿ.ಬಿ. ಬಿಂದು ವಂದಿಸಿದರು.