ಕಾಸರಗೋಡು: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಗಾಂಧಿ ಜಯಂತಿಯ ಪೂರ್ವಭಾವಿಯಾಗಿ ಪರವನಡ್ಕದ ಸರ್ಕಾರಿ ಮಾದರಿ ವಸತಿ ಹೈಯರ್ ಸೆಕೆಂಡರಿ ಶಾಲೆಯ ಸ್ಕೂಲ್ ಸ್ಟೂಡೆಂಟ್ ಕೋರ್(ಎಸ್‍ಪಿಸಿ) ಘಟಕದ ನೇತೃತ್ವದಲ್ಲಿ ಬೇಕಲ ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಯಿತು.
ಎಸ್‍ಪಿಸಿ ಜಿಲ್ಲಾ ಸಹಾಯಕ ನೋಡಲ್ ಅಧಿಕಾರಿ ಟಿ ತಂಬಾನ್, ಯೋಜನಾ ಸಹಾಯಕ ಅನೂಪ್ ಮತ್ತು ಸಮುದಾಯ ಪೆÇಲೀಸ್ ಅಧಿಕಾರಿಗಳಾದ ಶಿಜು ಮತ್ತು ಉಮ್ಮು ಕುಲ್ಸು ನೇತೃತ್ವ ವಹಿಸಿದ್ದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂರಕ್ಷಣಾ ಸಹಾಯಕ ಪಿ.ವಿ.ಶಾಜು ಮತ್ತು ಸಿಬ್ಬಂದಿ ಎಸ್‍ಪಿಸಿ ಕೆಡೆಟ್‍ಗಳನ್ನು ಸ್ವಾಗತಿಸಿದರು. ಬೇಕಲ ಕೋಟೆಯ ಒಳಾಂಗಣದಲ್ಲಿ ಶುಚೀಕರಣ ಕಾರ್ಯ ನಡೆಸಲಾಗಿತು.