ನವದೆಹಲಿ: ಆಂಡ್ರಾಯ್ಡ್ ಪೋನ್‍ಗಳಲ್ಲಿ ಭದ್ರತಾ ಬೆದರಿಕೆ ಇದೆ ಎಂದು ಭಾರತೀಯ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸೆರ್ಟ್ ಇನ್ ಎಚ್ಚರಿಕೆ ನೀಡಿದೆ.
ಸೆರ್ಟ್ ಇನ್ ನ ಎಚ್ಚರಿಕೆಯಲ್ಲಿ, ಆಂಡ್ರಾಯ್ಡ್ 11, 12.5, 12ಎಲ್. ಮತ್ತು 13 ಸೇರಿದಂತೆ ವಿವಿಧ ಆವೃತ್ತಿಗಳನ್ನು ಹೊಂದಿರುವ ಪೋನ್‍ಗಳಲ್ಲಿ ಭದ್ರತಾ ಬೆದರಿಕೆ ಇದೆ ಎಂದು ಹೇಳಲಾಗಿದೆ. ಪೋನ್ ಹ್ಯಾಕ್ ಮಾಡಿ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಂಭವವಿರುವುದರಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಸಿವಿಇ-20234863 ಮತ್ತು ಸಿವಿಇ 20234211 ಎಂದು ಗುರುತಿಸಲಾದ ಎರಡು ಭದ್ರತಾ ಬೆದರಿಕೆಗಳನ್ನು ಸೈಬರ್ ದಾಳಿಕೋರರು ಬಳಸಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಕೆಯು ಹೇಳುತ್ತದೆ. ಫ್ರೇಮ್ ವರ್ಕ್, ಸಿಸ್ಟಮ್, ಗೂಗಲ್ ಪ್ಲೇ ಸಿಸ್ಟಮ್ ಅಪ್‍ಡೇಟ್‍ಗಳು, ಮೀಡಿಯಾ ಟೆಕ್ ಕಾಂಪೆÇನೆಂಟ್‍ಗಳು, ಯುನಿಸಾಕ್ ಕಾಂಪೆÇನೆಂಟ್‍ಗಳು, ಕ್ವಾಲ್ಕಾಮ್ ಕಾಂಪೆÇನೆಂಟ್‍ಗಳು ಮತ್ತು ಕ್ವಾಲ್ಕಾಮ್ ಕ್ಲೋಸ್ಡ್ ಸೋರ್ಸ್ ಘಟಕಗಳು ಸೇರಿದಂತೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ವಿವಿಧ ಭಾಗಗಳಲ್ಲಿ ದುರ್ಬಲತೆ ಅಸ್ತಿತ್ವದಲ್ಲಿದೆ.
ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಲಭ್ಯವಿರುವ ನವೀಕರಣಗಳನ್ನು ಮುಂಚಿತವಾಗಿ ಪರಿಶೀಲಿಸಲು ಮತ್ತು ಅವುಗಳನ್ನು ತಕ್ಷಣವೇ ಸ್ಥಾಪಿಸಲು ಸೆರ್ಟ್ ಇನ್ ಶಿಫಾರಸು ಮಾಡುತ್ತದೆ. ನವೀಕರಣವನ್ನು ವಿಳಂಬಗೊಳಿಸುವುದರಿಂದ ಪೋನ್‍ಗೆ ಭದ್ರತಾ ಬೆದರಿಕೆ ಉಂಟಾಗಬಹುದು. ಭದ್ರತಾ ನವೀಕರಣಗಳ ಬಗ್ಗೆ ಜಾಗರೂಕರಾಗಿರಿ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಆಂಡ್ರಾಯ್ಡ್ ಸಿಸ್ಟಮ್ ಸೂಚನೆಗಳನ್ನು ಅನುಸರಿಸಿ ಎಂದು ಎಚ್ಚರಿಕೆ ಹೇಳುತ್ತದೆ.