ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಪಡನ್ನ ನಿವಾಸಿ, ಕೊಚ್ಚಿಯ ಜಿಮ್ನೇಶಿಯಂ ಒಂದರ ತರಬೇತುದಾರೆ 32ರ ಹರೆಯದ ಯುವತಿಯ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿ ಚೆನ್ನೈನಿಂದ ಪೊಲೀಸರು ಬಂಧಿಸಿರುವ ಚಿತ್ರನಟ ಶಿಯಾಸ್ ಕರೀಂನನ್ನು ಪೊಲೀಸರು ಚಂದೇರ ಪೊಲೀಸ್ ಠಾಣೆಗೆ ಕರೆತಂದು, ನಂತರ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.
ವಿವಾಹ ಭರವಸೆ ನೀಡಿ ಕೊಚ್ಚಿ, ಮೂನಾರ್‍ನ ಹೋಟೆಲ್‍ಗಳಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವುದಲ್ಲದೆ, ಎರ್ನಾಕುಳಂನ ಜಿಮ್ ಒಂದರಲ್ಲಿ ಪಾಲುದಾರಳನ್ನಾಗಿ ಮಾಡುವುದಾಗಿ 11ಲಕ್ಷ ರೂ. ವಸೂಲಿಮಾಡಿರುವುದಾಗಿ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಳು. ವಿದೇಶಕ್ಕೆ ತೆರಳಿದ್ದ ಈತನ ವಿರುದ್ಧ ಲುಕೌಟ್ ನೋಟೀಸ್ ಜಾರಿಗೊಳಿಸಿದ್ದ ಹಿನ್ನೆಲೆಯಲ್ಲಿ ವಿಮಾನದಲ್ಲಿ ವಾಪಸಾಗುತ್ತಿದ್ದಂತೆ ಚೆನ್ನೈ ವಿಮಾನ ನಿಲ್ದಾಣದಿಂದ ಶಿಯಾಸ್‍ನನ್ನು ಪೊಲೀಸರು ಬಂಧಿಸಿದ್ದರು.