ಕಾಸರಗೋಡು: ಮಾವೇಲಿ ಎಕ್ಸ್‍ಪ್ರೆಸ್ ರೈಲು ಹಳಿ ಬದಲಿಸಿ ಸಂಚರಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ 6.35ಕ್ಕೆ ಕಾಞಂಗಾಡ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನಿಂದ ತಿರುವನಂತಪುರಕ್ಕೆ ಹೋಗುವ ರೈಲು 16603 ಬೈ ಟ್ರ್ಯಾಕ್‍ಗೆ ಏರಿತು. ಈ ಹಳಿಯಲ್ಲಿ ಬೇರೆ ರೈಲುಗಳಿಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.
ಹಳಿ 1ಕ್ಕೆ ಹೋಗಬೇಕಿದ್ದ ರೈಲು ಬೇರೆ ಸಿಗ್ನಲ್ ಪಡೆದು ಮಧ್ಯ ಹಳಿ ಪ್ರವೇಶಿಸುತ್ತಿತ್ತು. ಅದೇ ಹಳಿಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ ನಂತರ ಮರಳಿ ನೈಜ ಹಳಿಗೆ ಮರಳಿ ತನ್ನ ಪ್ರಯಾಣವನ್ನು ಮುಂದುವರೆಸಿತು.
ರೈಲಿನ ಹಳಿ ಬದಲಾವಣೆಗೆ ಸಿಗ್ನಲ್ ದೋಷವೇ ಕಾರಣ ಎಂಬುದು ಪ್ರಾಥಮಿಕ ತೀರ್ಮಾನ. ಘಟನೆಯ ಕುರಿತು ರೈಲ್ವೇ ತನಿಖೆ ಆರಂಭಿಸಿದೆ.