ಕಾಸರಗೋಡು: ರಾತ್ರಿ ಗಸ್ತಿನಲ್ಲಿದ್ದ ಎಸ್‍ಐ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತಿಗೆ ನಿವಾಸಿ ಅಬ್ದುಲ್ ಬಾಸಿತ್ ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ ಠಾಣೆ ಎಸ್.ಐ ಅನ್ಸಾರ್ ಅವರು ಕರ್ತವ್ಯ ನಿಮಿತ್ತ ಕಟ್ಟತ್ತಡ್ಕ ಪ್ರದೇಶಕ್ಕೆ ಅಗಮಿಸಿದ ಸಂದರ್ಭ ರಸ್ತೆಬದಿ ತಡರಾತ್ರಿ ವರೆಗೂ ನಿಂತಿರುವುದನ್ನು ಪ್ರಶ್ನಿಸಿದ ಎಸ್.ಐ ಕೈಹಿಡಿದು ತಿರುಚಿ, ಹಲ್ಲೆಗೆ ಮುಂದಾಗಿದ್ದನು. ತಕ್ಷಣ ಪೊಲೀಸರು ಈತನನ್ನು ವಶಕ್ಕೆ ತೆಗದು ಜೀಪಿಗೇರಿಸಿ ಕುಂಬಳೆ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದರು.